ಪೋಪ್: ಯುವ ಜನರಿಗೆ ನಮ್ಮ ಅವಶ್ಯಕತೆಯಿಲ್ಲ, ಅವರಿಗೆ ದೇವರ ಅವಶ್ಯಕತೆ ಇದೆ

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದಲ್ಲಿ ಆಬ್ಲೇಟ್ಸ್ ಆಫ್ ಸೇಂಟ್ ಜೋಸೆಫ್ ಧಾರ್ಮಿಕ ಸಭೆಯ ಸದಸ್ಯರ ನಿಯೋಗವನ್ನು ಸ್ವಾಗತಿಸಿಕೊಂಡರು. ಇದೇ ವೇಳೆ ಅವರು ಯುವ ಜನರಿಗೆ ಪ್ರಸ್ತುತ ನಮ್ಮ ಅವಶ್ಯಕತೆ ಇಲ್ಲ. ಅವರಿಗೆ ಹಿಂದೆಂದಿಗಿಂತಲೂ ಈಗ ದೇವರ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದಲ್ಲಿ ಆಬ್ಲೇಟ್ಸ್ ಆಫ್ ಸೇಂಟ್ ಜೋಸೆಫ್ ಧಾರ್ಮಿಕ ಸಭೆಯ ಸದಸ್ಯರ ನಿಯೋಗವನ್ನು ಸ್ವಾಗತಿಸಿಕೊಂಡರು. ಇದೇ ವೇಳೆ ಅವರು ಯುವ ಜನರಿಗೆ ಪ್ರಸ್ತುತ ನಮ್ಮ ಅವಶ್ಯಕತೆ ಇಲ್ಲ. ಅವರಿಗೆ ಹಿಂದೆಂದಿಗಿಂತಲೂ ಈಗ ದೇವರ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ತಮ್ಮ ಇಪ್ಪಂತ್ತೆಂಟನೇ ಜನರಲ್ ಚಾಪ್ಟರ್ ಸಮಾವೇಶಕ್ಕಾಗಿ ಆಬ್ಲೇಟ್ಸ್ ಆಫ್ ಸೇಂಟ್ ಜೋಸೆಫ್ ಧಾರ್ಮಿಕ ಸಭೆಯ ಸದಸ್ಯರು ವ್ಯಾಟಿಕನ್ ನಗರಕ್ಕೆ ಆಗಮಿಸಿದ್ದರು.

"ನೀಮಗೀಗಾಗಲೇ ತಿಳಿದಿರುವಂತೆ ನನ್ನ ಕುಟುಂಬದ ಬೇರೂಗಳೂ ಸಹ ನಿಮ್ಮ ಸ್ಥಾಪಕ ಸಂತರಾದ ಸಂತ ಜೋಸೆಫ್ ಮರೆಲ್ಲೋ ಅವರ ಭೂಮಿಯಲ್ಲಿದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಇದೇ ವೇಳೆ ಸಂತ ಜೋಸೆಫರ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಅವರು ಪವಿತ್ರ ಕುಟುಂಬದ ಪೋಷಕರಾಗಿದ್ದು, ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.

26 August 2024, 15:18