ಹುಡುಕಿ

ಪೋಪ್ ಫ್ರಾನ್ಸಿಸ್: ಎಲ್ಲಾ ಕ್ರೈಸ್ತರೂ ಪ್ರತಿ ಮನುಷ್ಯನ ಘನತೆಯನ್ನು ಧೃಡೀಕರಿಸಬೇಕು

ಹದಿನೇಳನೇ ಇಂಟರ್-ಕ್ರಿಶ್ಚಿಯನ್ ಸಿಂಪೋಸಿಯಮ್ ಸಭೆಗೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಅವರು ಎಲ್ಲಾ ಕ್ರೈಸ್ತರೂ ಪ್ರತಿ ಮನುಷ್ಯನ ಘನತೆಯನ್ನು ಧೃಡೀಕರಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅದೇ ರೀತಿ ಈ ಕಾಲಘಟ್ಟದಲ್ಲಿ ಮನುಷ್ಯರಾಗುವುದು ಎಂದರೇನು ಎಂಬ ಕುರಿತೂ ಸಹ ಅವಲೋಕನ ನಡೆಸಿ, ಸೂಕ್ತ ಉತ್ತರಗಳನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಹದಿನೇಳನೇ ಇಂಟರ್-ಕ್ರಿಶ್ಚಿಯನ್ ಸಿಂಪೋಸಿಯಮ್ ಸಭೆಗೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಅವರು ಎಲ್ಲಾ ಕ್ರೈಸ್ತರೂ ಪ್ರತಿ ಮನುಷ್ಯನ ಘನತೆಯನ್ನು ಧೃಡೀಕರಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅದೇ ರೀತಿ ಈ ಕಾಲಘಟ್ಟದಲ್ಲಿ ಮನುಷ್ಯರಾಗುವುದು ಎಂದರೇನು ಎಂಬ ಕುರಿತೂ ಸಹ ಅವಲೋಕನ ನಡೆಸಿ, ಸೂಕ್ತ ಉತ್ತರಗಳನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾನವತ್ವದ ಕುರಿತು ಬೆಳಕನ್ನು ಚೆಲ್ಲಿದ್ದು, ಈ ಪ್ರಪಂಚದಲ್ಲಿ ಮಾನವನ ಪಾತ್ರವೇನು? ಹುಟ್ಟು, ಸಾವು ಹಾಗೂ ಜೀವಿಸುವ ನಿಟ್ಟಿನಲ್ಲಿ ಮಾನವನು ನಿಜವಾಗಿಯೂ ಕಂಡುಕೊಳ್ಳಬೇಕಿರುವುದು ಏನನ್ನು ಎಂಬಂತಹ ಮೂಲ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಗೂ ಅವುಗಳಿಗೆ ಉತ್ತರವನ್ನು ನೀಡುವಲ್ಲಿ ಪ್ರಯತ್ನಿಸುವ ಮೂಲಕ ತಮ್ಮ ಸಂದೇಶದಲ್ಲಿ ಮಾನವ ಘನತೆಯ ಕುರಿತು ವಿವರಿಸಿದ್ದಾರೆ.

ಜಗತ್ತಿನ ಎಲ್ಲಾ ಕ್ರೈಸ್ತರು - ಅವರು ಯಾವುದೇ ಕ್ರೈಸ್ತ ಪಂಗಡಕ್ಕೆ ಸೇರಿದ್ದರೂ ಸಹ ಪ್ರತಿಯೊಬ್ಬ ಮಾನವನ ಘನತೆಯನ್ನು ಧೃಡೀಕರಿಸುವಲ್ಲಿ ಪಾತ್ರವನ್ನು ಹೊಂದಿದ್ದಾರೆ ಮಾತ್ರವಲ್ಲದೆ ಇದು ನಮ್ಮೆಲ್ಲರ ಮೂಲಭೂತ ಕರ್ತವ್ಯವೂ ಆಗಿದೆ ಎಂದು ಹೇಳಿದ್ದಾರೆ.

28 August 2024, 15:03