ಪೋಪ್ ಫ್ರಾನ್ಸಿಸ್ ಅವರು ಮಾಲ್ವಾಯ್ ದೇಶದ ಅಧ್ಯಕ್ಷರನ್ನು ಬರಮಾಡಿಕೊಂಡರು

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಸೋಮವಾರ ಮಲ್ವಾಯ್ ದೇಶದ ಅಧ್ಯಕ್ಷರನ್ನು ಸ್ವಾಗತಿಸಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಸೋಮವಾರ ಮಲ್ವಾಯ್ ದೇಶದ ಅಧ್ಯಕ್ಷರನ್ನು ಸ್ವಾಗತಿಸಿಕೊಂಡಿದ್ದಾರೆ.

ಮಾಲ್ವಾಯ್ ದೇಶದ ಅಧ್ಯಕ್ಷ ಲಾಜರಸ್ ಮಕರ್ಥಿ ಚಕ್ವೆರಾ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿದರು. ಇದಾದ ನಂತರ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪರೋಲಿನ್ ಅವರನ್ನು ಭೇಟಿ ಮಾಡಿದರು.

ವ್ಯಾಟಿಕನ್ ಮಾಧ್ಯಮ ಪೀಠವು ನೀಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ಪಕ್ಷಗಳ ಗಣ್ಯರು ಉಭಯ ದೇಶಗಳ ಸೌಹಾರ್ದ ಸಂಬಂಧದ ಕುರಿತು ಮಾತುಕತೆ ನಡೆಸಿದರು. ಇದೇ ವೇಳೆ ಅವರ ನಡುವೆ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಕುರಿತು ಮಾತುಕತೆ ನಡೆಯಿತು.

20 August 2024, 15:57