ಹುಡುಕಿ

ಪರಮಾಣು ಬಾಂಬ್ ನಿಗ್ರಹ ಹಾಗೂ ವಿಶ್ವ ಶಾಂತಿಗಾಗಿ ಪ್ರಾರ್ಥಿಸಲು ಕರೆ ನೀಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ದೇವದೂತನ ಸಂದೇಶ ಪ್ರಾರ್ಥನೆಯನ್ನು ಪಠಿಸಿದ ನಂತರ ತಮ್ಮ ಪ್ರಭೋದನೆಯಲ್ಲಿ ಮಾತನಾಡಿ ವಿಶ್ವದ ಎಲ್ಲಾ ದೇಶಗಳು ಪರಮಾಣು ಬಾಂಬ್ ಅನ್ನು ತ್ಯಜಿಸಿ, ಅದರ ಉತ್ಪಾದನೆಯನ್ನು ನಿಲ್ಲಿಸಿ, ಶಾಂತಿಗಾಗಿ ಶ್ರಮಿಸಬೇಕು ಎಂಬ ಕರೆಯನ್ನು ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ದೇವದೂತನ ಸಂದೇಶ ಪ್ರಾರ್ಥನೆಯನ್ನು ಪಠಿಸಿದ ನಂತರ ತಮ್ಮ ಪ್ರಭೋದನೆಯಲ್ಲಿ ಮಾತನಾಡಿ ವಿಶ್ವದ ಎಲ್ಲಾ ದೇಶಗಳು ಪರಮಾಣು ಬಾಂಬ್ ಅನ್ನು ತ್ಯಜಿಸಿ, ಅದರ ಉತ್ಪಾದನೆಯನ್ನು ನಿಲ್ಲಿಸಿ, ಶಾಂತಿಗಾಗಿ ಶ್ರಮಿಸಬೇಕು ಎಂಬ ಕರೆಯನ್ನು ನೀಡಿದ್ದಾರೆ. 

ಅಂತರ್ಧರ್ಮಿಯ ಸಂವಾದ ಹಾಗೂ ಭಾವೈಕ್ಯತೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಪವಿತ್ರತ್ಮರು ಭಾವೈಕ್ಯತೆಯನ್ನು ವೃದ್ಧಿಗೊಳಿಸುವಲ್ಲಿ ನಮಗೆ ನೆರವಾಗುತ್ತಾರೆ. ಅವರ ವರದಾನ ಯಾವ ಸಂದರ್ಭದಲ್ಲಿ ನಮ್ಮ ಮೇಲೆ ಇಳಿದು ಬರುತ್ತದೆ ಎಂಬುದನ್ನು ನಾವು ಹೇಳಲಾಗುವುದಿಲ್ಲ. ಆದರೆ ಅವರು ಒಮ್ಮೆ ಸಕಾರಾತ್ಮಕ ಪರಿಣಾಮವನ್ನು ನಮ್ಮ ಮೇಲೆ ಬೀರಿದರೆ ಯಾವುದೇ ಸಮುದಾಯಗಳಾಗಲಿ ಪರಸ್ಪರ ಅರ್ಥೈಸಿಕೊಂಡು ಹಾಗೂ ಒಮ್ಮತದ ಮೂಲಕ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ ಎಂದು ಹೇಳಿದರು.

ಅಂತಿಮವಾಗಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಅಂತರ್ಧರ್ಮಿಗೆ ಸಂವಾದ ಎಂಬುದು ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

11 August 2024, 18:02