ಎರಡನೇ ಶಾಂತಿ ಸಭೆಗೆ ರಷ್ಯಾ ಹಾಜರಾಗಬೇಕು ಎಂದು ಬಯಸುತ್ತಿರುವ ಉಕ್ರೇನ್
ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್
ಉಕ್ರೇನ್ ದೇಶದ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ನವೆಂಬರ್ ತಿಂಗಳಲ್ಲಿ ನಡೆಯಲಿರುವ ಶಾಂತಿ ಸಭೆಗಳಿಗೆ ರಷ್ಯಾ ಪ್ರತಿನಿಧಿಗಳು ಹಾಜರಾಗಬೇಕು ಎಂದು ಬಯಸಿದ್ದಾರೆ.
ಯುದ್ಧ ಖೈದಿಗಳ ಕುರಿತು ಮಾತುಕತೆ
ಎರಡು ವರ್ಷದ ಹಿಂದೆ ಮಾಸ್ಕೋ ಉಕ್ರೇನ್ ದೇಶದ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿದ ನಂತರ, ಸುಮಾರು ಮೂರು ಸಾವಿರ ಉಕ್ರೇನ್ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿ, ಕೈದಿಗಳ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದಾಗ್ಯೂ, ಇನ್ನೂ ಹತ್ತು ಸಾವಿರಕ್ಕೂ ಹೆಚ್ಚು ಉಕ್ರೇನ್ ಯುದ್ಧ ಕೈದಿಗಳು ರಷ್ಯಾ ದೇಶದ ವಶದಲ್ಲಿದ್ದು, ಅಲ್ಲಿ ಅವರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದಿ ಬಹಿರಂಗಪಡಿಸಿದೆ.
ಉಕ್ರೇನ್ ಸೇನೆಯೂ ಸಹ ರಷ್ಯಾ ಯುದ್ಧ ಕೈದಿಗಳ ಮೇಲೆ ಹಿಂಸಾಚಾರ ನಡೆಸಿರುವ ಘಟನೆಗಳು ನಡೆದಿವೆ ಎಂದೂ ಸಹ ವರದಿಯಾಗಿದೆ.
ಹೌದು, ಉಕ್ರೇನ್ ಅಧಿಕಾರಿಗಳು ತಮ್ಮಲ್ಲಿರುವ ರಷ್ಯಾ ದೇಶದ ಯುದ್ಧ ಕೈದಿಗಳನ್ನು ಇಟ್ಟಿರುವ ಕ್ಯಾಂಪುಗಳಿಗೆ ಅಂತರಾಷ್ಟ್ರೀಯ ಮಾನವ ಹಕ್ಕು ಕಾರ್ಯಕರ್ತರು ಸೇರಿದಂತೆ ಮಾಧ್ಯಮಗಳು ಹಾಗೂ ಪತ್ರಕರ್ತರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿದ್ದಾರೆ. ಇದೂ ಸಹ ಅಲ್ಲಿ ಹಿಂಸಾಚಾರದಂತಹ ಘಟನೆಗಳನ್ನು ತಪ್ಪಿಸಿರಬಹುದು ಎಂದು ಅಂದಾಜಿಸಲಾಗಿದೆ. ಅದಾಗ್ಯೂ, ಈ ಯುದ್ಧ ಕೈದಿಗಳಿಗೆ ಉಕ್ರೇನ್ ದೇಶವು ಕಲ್ಪಿಸಿರುವ ಕ್ರಮಗಳು ಹೆಚ್ಚು ಸರಿಯಾಗಿಲ್ಲ ಎಂದು ವಿಶ್ವಸಂಸ್ಥೆಯು ಹೇಳಿದೆ.