ಉಕ್ರೇನ್ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಮನವಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಭಾನುವಾರ ತಮ್ಮ "ದೇವದೂತನ ಸಂದೇಶ" ಪ್ರಾರ್ಥನೆಯ ನಂತರ ಚಿಂತನೆಯನ್ನು ವ್ಯಕ್ತಪಡಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಉಕ್ರೇನ್ ದೇಶಕ್ಕಾಗಿ ಪ್ರಾರ್ಥಿಸಿದ್ದಾರೆ ಹಾಗೂ ಉಕ್ರೇನ್ ದೇಶದಲ್ಲಿ ಧಾರ್ಮಿಕ ಸ್ವಾಂತಂತ್ರ್ಯಕ್ಕಾಗಿ ಮನವಿಯನ್ನು ಮಾಡಿದ್ದಾರೆ.
ಉಕ್ರೇನ್ ದೇಶದ ಪಾರ್ಲಿಮೆಂಟ್ ತನ್ನ ದೇಶದ ಜನತೆ ರಷ್ಯನ್ ಆರ್ಥಡಾಕ್ಸ್ ಧರ್ಮಸಭೆಯೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳಬೇಕು. ಇನ್ನು ಒಂಬತ್ತು ತಿಂಗಳ ಅವಧಿಯಲ್ಲಿ ಇದನ್ನು ನೆರವೇರಿಸಬೇಕು ಎಂದು ವಿಧೇಯಕವನ್ನು ಜಾರಿಗೊಳಿಸಿದ ಹಿನ್ನೆಲೆ ಪೋಪ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ರಷ್ಯನ್ ಆರ್ಥಡಾಕ್ಸ್ ಧರ್ಮಸಭೆಯ ಪ್ರಧಾನ ಧರ್ಮಗುರುಗಳು ಸಹ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, ಇದು ಅಂತರಾಷ್ಟ್ರೀಯವಾಗಿ ಗುರುತಿಸಲಾಗಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ್ದಾರೆ.
ಎಂದಿನಂತೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ದೇವದೂತನ ಸಂದೇಶ ಪ್ರಾರ್ಥನೆಯಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಯುದ್ಧಗಳು ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.