ಹುಡುಕಿ

ವೆನಿಜುಲಾದ ಜನರಿಗೆ ಐಕ್ಯತೆಯನ್ನು ಹಾಗೂ ಬೆಂಬಲವನ್ನು ವ್ಯಕ್ತಪಡಿಸಿದ ಪನಾಮದ ಆರ್ಚ್ ಬಿಷಪ್

ವೆನಿಜುಲಾದೇಶದಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಅಕ್ರಮ ನಡೆಸಲಾಗಿದೆ ಎಂದು ಸಾವಿರಾರು ಜನ ಪ್ರಜೆಗಳು ಇದರ ವಿರುದ್ಧ ಪ್ರತಿಭಟಿಸಲು ಬೀದಿಗೆ ಬಂದಿದ್ದಾರೆ. ಹೀಗೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಸುಮಾರು 2000 ಜನರನ್ನು ಜೈಲಿಗೆ ತಳ್ಳಲಾಗಿದೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ವೆನಿಜುಲಾದೇಶದಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಅಕ್ರಮ ನಡೆಸಲಾಗಿದೆ ಎಂದು ಸಾವಿರಾರು ಜನ ಪ್ರಜೆಗಳು ಇದರ ವಿರುದ್ಧ ಪ್ರತಿಭಟಿಸಲು ಬೀದಿಗೆ ಬಂದಿದ್ದಾರೆ. ಹೀಗೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಸುಮಾರು 2000 ಜನರನ್ನು ಜೈಲಿಗೆ ತಳ್ಳಲಾಗಿದೆ.

ಪನಾಮ ನಗರದ ಅರ್ಚ್ ಬಿಷಪ್ ಹೊಸೆ ಡುಮ್ಮಿಂಗೋ ಮೆನ್ಡಿಯೇಟ ಅವರು ಟಿವಿಯಲ್ಲಿ ಬಲಿ ಪೂಜೆಯನ್ನು ಅರ್ಪಿಸುತ್ತಾ, ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನರಿಗೆ ಬೆಂಬಲವನ್ನು ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. "ವೆನಿಜುಲ ದೇಶದ ನಾಗರಿಕರೇ ಪನಾಮ ದೇಶದ ಪ್ರಜೆಗಳು ನಿಮ್ಮ ಹೋರಾಟದಲ್ಲಿ ನಿಮ್ಮ ಜೊತೆಗಿದ್ದಾರೆ" ಎಂದು ಆರ್ಚ್ ಬಿಷಪ್ ಹೇಳಿದ್ದಾರೆ.

ವೆನಿಜುಲಾ ದೇಶದ ಜನರಿಗೆ ಅಂತರರಾಷ್ಟ್ರೀಯ ಸಮುದಾಯವು ಬೆಂಬಲವನ್ನು ನೀಡಬೇಕು ಎಂದು ಆರ್ಚ್ ಬಿಷಪ್ ಅವರು ಮನವಿ ಮಾಡಿದ್ದಾರೆ. ಕಾರ್ಗತ್ತಲು ಹಾಗೂ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಸತ್ಯಕ್ಕೆ ಎಂದಿಗೂ ಜಯವಾಗಲಿ ಎಂದು ಅವರು ಪ್ರತಿಪಾದಿಸಿದ್ದಾರೆ.

05 August 2024, 18:20