ಲಕ್ಸೆಂಬರ್ಗ್ ದೇಶದಲ್ಲಿ ಕಥೋಲಿಕ ಧರ್ಮಸಭೆಯ ಸಂಕ್ಷಿಪ್ತ ಇತಿಹಾಸ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಲಕ್ಸೆಂಬರ್ಗ್ ದೇಶಕ್ಕೆ ತಮ್ಮ 46ನೇ ಪ್ರೇಷಿತ ಭೇಟಿಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಕ್ರೈಸ್ತ ಧರ್ಮ ಬೆಳೆದು ಬಂದ ಬಗೆಯ ಕುರಿತು ಸಂಕ್ಷಿಪ್ತವಾಗಿ ಬೆಳಕನ್ನು ಚೆಲ್ಲಲಾಗಿದೆ.
ಮೊದಲು ಲುಕ್ಸೆಂಬರ್ಗ್ ಎಂಬ ದೇಶವು ಜರ್ಮನಿ ದೇಶದ ಭಾಗವಾಗಿದ್ದು, ಸುಮಾರು ನಾಲ್ಕನೇ ಶತಮಾನದಲ್ಲಿ ಕಥೋಲಿಕ ಕ್ರೈಸ್ತ ಧರ್ಮ ಇಲ್ಲಿಗೆ ಕಾಲಿಟ್ಟಿತು. ಇಲ್ಲಿನ ಅತ್ಯಂತ ಹಳೆಯ ನಗರ ಎಕ್ಟೆರ್ ನಾಕ್ ಎಂಬಲ್ಲಿ ಫ್ರಿಸಿಯನ್ನರ ಪ್ರೇಷಿತ, ನೆದರ್ಲ್ಯಾಂಡ್ಸ್ ಹಾಗೂ ಲುಕ್ಸೆಂಬರ್ಗ್ ದೇಶಗಳ ಪ್ರೇಷಿತ ಎಂದು ಕರೆಯಲ್ಪಡುವ ಸಂತ ವಿಲ್ಲಿಬೋರ್ಡ್ ಎಂಬ ಇಂಗ್ಲೀಷ್ ಸಂತರು ಇಲ್ಲಿಗೆ ಬಂದು ಮೊದಲಿಗೆ ಸನ್ಯಾಸಿ ಮಠವನ್ನು ಆರಂಭಿಸಿದರು. ಮಧ್ಯಯುಗದಲ್ಲಿ ಬೆನೆಡಿಕ್ಟೈನ್, ಡೊಮಿನಿಕನ್ ಹಾಗೂ ಫ್ರಾನ್ಸಿಸ್ಕನ್ ಸಭೆಯ ಗುರುಗಳು ಇಲ್ಲಿನ ಜನತೆಯ ಮೇಲೆ ಅಗಾಧ ಪರಿಣಾಮವನ್ನು ಬೀರಿದರು.
ಇಲ್ಲಿನ ಜನತೆ ಮಾತೆ ಮರಿಯಮ್ಮನವರ ಕುರಿತು ಅಗಾಧ ಭಕ್ತಿಯನ್ನು ಹೊಂದಲು ಆರಂಭಿಸಿದರು. ಮಾತೆ ಮರಿಯಮ್ಮನವರನ್ನು "ಕಷ್ಟಪಡುವವರ ಉಪಶಮನವೇ" ಎಂದು ಕರೆದು, ಆ ಕುರಿತು ಅಗಾಧ ಭಕ್ತಿ ಆಚರಣೆಯನ್ನು ಹಮ್ಮಿಕೊಂಡರು. ಪೋಪ್ ಸಂತ ದ್ವಿತೀಯ ಜಾನ್ ಪೌಲರು 1985 ರಲ್ಲಿ ಇಲ್ಲಿಗೆ ಭೇಟಿ ನೀಡಿದ ಪೋಪ್ ಆಗಿದ್ದಾರೆ.