ಹುಡುಕಿ

ಇಸ್ರೇಲ್ ದಾಳಿ: ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ

ತಮ್ಮ ನಾಯಕನ ಸಾವನ್ನು ಘೋಸಿರುವ ಹೇಳಿಕೆಯಲ್ಲಿ ಸಂಘಟನೆಯು “ನಸ್ರಲ್ಲಾಹ್ ಅವರು ಕೂಡಾ ಹುತಾತ್ಮರನ್ನು ಸೇರಿಕೊಂಡಿದ್ದಾರೆ” ಎಂದು ಹೇಳಿದೆ. ತರುವಾಯ ಹಿಜ್ಬುಲ್ಲಾದ ಅಲ್-ಮನರ್ ಟಿವಿಯು ನಸ್ರಲ್ಲಾ ಅವರ ಮರಣಕ್ಕೆ ಸಂತಾಪ ಸೂಚಿಸುವ ಕುರಾನ್ ಸ್ಲೋಕಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವರದಿ: ಅಜಯ್ ಕುಮಾರ್

ಶುಕ್ರವಾರದಂದು ಇಸ್ರೇಲ್ ನಡೆಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ತಮ್ಮ ನಾಯಕ ಹಸನ್ ನಸ್ರಲ್ಲಾ ಮೃತಪಟ್ಟಿರುವುದನ್ನು ಲೆಬನಾನ್‌ನ ಬಂಡುಕೋರ ಸಂಘಟನೆ ಹೆಜ್ಬೊಲ್ಲಾಹ್  ಶನಿವಾರ ದೃಢಪಡಿಸಿದೆ. ಇಸ್ರೇಲ್‌ ದಾಳಿ

ಬೈರುತ್‌ನಲ್ಲಿರುವ ಗುಂಪಿನ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಸಂಘಟನೆಯ 64 ವರ್ಷದ ನಾಯಕನನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆಯು ಶನಿವಾರ ಮುಂಜಾನೆ ಹೇಳಿಕೊಂಡಿತ್ತು. ಈ ಕಾರ್ಯಾಚರಣೆಯನ್ನು ಇಸ್ರೇಲ್ ‘ಆಪರೇಷನ್ ನ್ಯೂ ಆರ್ಡರ್’ ಎಂದು ಕರೆದಿದೆ.

ತಮ್ಮ ನಾಯಕನ ಸಾವನ್ನು ಘೋಸಿರುವ ಹೇಳಿಕೆಯಲ್ಲಿ ಸಂಘಟನೆಯು “ನಸ್ರಲ್ಲಾಹ್ ಅವರು ಕೂಡಾ ಹುತಾತ್ಮರನ್ನು ಸೇರಿಕೊಂಡಿದ್ದಾರೆ” ಎಂದು ಹೇಳಿದೆ. ತರುವಾಯ ಹಿಜ್ಬುಲ್ಲಾದ ಅಲ್-ಮನರ್ ಟಿವಿಯು ನಸ್ರಲ್ಲಾ ಅವರ ಮರಣಕ್ಕೆ ಸಂತಾಪ ಸೂಚಿಸುವ ಕುರಾನ್ ಸ್ಲೋಕಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್‌ನೊಂದಿಗೆ ಮಾತನಾಡಿದ ಹಿಜ್ಬುಲ್ಲಾಹ್ ಸಂಘಟನೆಯ ಅಧಿಕಾರಿಗಳು ಶನಿವಾರ ಮುಂಜಾನೆ ನಸ್ರಲ್ಲಾ ಅವರ ದೇಹವನ್ನು ಮತ್ತೊಬ್ಬ ಉನ್ನತ ಕಮಾಂಡರ್ ಅಲಿ ಕರಕಿ ಅವರ ದೇಹದೊಂದಿಗೆ ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.

ಅಕ್ಟೋಬರ್ 7, 2023 ರಂದು ಇಸ್ರೇಲ್‌ನ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಇಸ್ರೇಲ್‌ನೊಂದಿಗೆ ಸಶಸ್ತ್ರ ಸಂಘರ್ಷದಲ್ಲಿದ್ದ ಹಿಜ್ಬುಲ್ಲಾ ಸಂಘಟನೆಗೆ ತಮ್ಮ ಸಂಘಟನೆಯ ದೀರ್ಘಕಾಲದ ನಾಯಕನ ಸಾವು ಭಾರಿ ಹೊಡೆತವಾಗಿದೆ.

ನಸ್ರಲ್ಲಾ ಅವರ ಮರಣವನ್ನು ಘೋಷಿಸಿದ ನಂತರ ಸಂಘಟನೆಯು ಇಸ್ರೇಲ್ ವಿರುದ್ಧ ತನ್ನ ಯುದ್ಧವನ್ನು ಮುಂದುವರೆಸುವುದಾಗಿ ಹೇಳಿದೆ. ಗಾಜಾ ಮತ್ತು ಪ್ಯಾಲೆಸ್ತೀನ್‌ಗೆ ಬೆಂಬಲ ಹಾಗೂ ಲೆಬನಾನ್ ಮತ್ತು ಅದರ ಜನರ ರಕ್ಷಣೆಗಾಗಿ ಈ ಹೋರಾಟ ಮುಂದುವರೆಯುವುದಾಗಿ ಹೇಳಿದೆ.ಇಸ್ರೇಲ್‌ ದಾಳಿ

ನಸ್ರಲ್ಲಾ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬೊಲ್ಲಾವನ್ನು ಮುನ್ನಡೆಸಿದ್ದರು. ಇಸ್ರೇಲ್ ನಡೆಸಿದ ದಾಳಿಯಲ್ಲಿ ನಸ್ರಲ್ಲಾಹ್ ಜೊತೆಗೆ ಅವರ ಮಗಳು ಝೈನಾಬ್ ನಸ್ರಲ್ಲಾ, ಹಿಜ್ಬುಲ್ಲಾದ ಸದರ್ನ್ ಫ್ರಂಟ್ನ ಕಮಾಂಡರ್ ಅಲಿ ಕರ್ಕಿ ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ಸ್‌ನ ಡೆಪ್ಯುಟಿ ಕಮಾಂಡರ್ ಅಬ್ಬಾಸ್ ನಿಲ್ಫೊರೌಶನ್ ಸಹ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ.

28 September 2024, 17:33