ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ನಿಜವಾಗಿ ನೀವು ಪ್ರಭುವನ್ನು ಅರಿತಾಗ ಎಲ್ಲವೂ ಬದಲಾಗುತ್ತದೆ

ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸಿದ ಪೋಪ್ ಫ್ರಾನ್ಸಿಸ್ ಅವರು ಪ್ರಭುವಿನ ಕುರಿತು ಜ್ಞಾನವನ್ನು ಹೊಂದುವುದರ ಪ್ರಾಮುಖ್ಯತೆಯ ಕುರಿತು ಹೇಳಿದರು. ಈ ವೇಳೆ ಅವರು ನಾವು ಪ್ರಭುವಿನ ಶುಭಸಂದೇಶದಿಂದ ರೂಪಾಂತರ ಹೊಂದಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸಿದ ಪೋಪ್ ಫ್ರಾನ್ಸಿಸ್ ಅವರು ಪ್ರಭುವಿನ ಕುರಿತು ಜ್ಞಾನವನ್ನು ಹೊಂದುವುದರ ಪ್ರಾಮುಖ್ಯತೆಯ ಕುರಿತು ಹೇಳಿದರು. ಈ ವೇಳೆ ಅವರು ನಾವು ಪ್ರಭುವಿನ ಶುಭಸಂದೇಶದಿಂದ ರೂಪಾಂತರ ಹೊಂದಬೇಕು ಎಂದು ಹೇಳಿದ್ದಾರೆ.

ಇಂದಿನ ಶುಭ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಶಿಷ್ಯರನ್ನು ಕುರಿತು "ನೀವು ನನ್ನನ್ನು ಯಾರೆನ್ನುತ್ತೀರಿ?" ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಪ್ರಭುವಿನ ಈ ಪ್ರಶ್ನೆಯ ಕುರಿತು ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಚಿಂತನೆಯನ್ನು ನಡೆಸಿದ್ದಾರೆ.

ಈ ಪ್ರಶ್ನೆಗೆ ಪೇತ್ರ "ನೀವು ಅಭಿಷಿಕ್ತರಾದ ಲೋಕೋದ್ಧಾರಕ" ಎಂದು ಸರಿಯಾಗಿ ಹೇಳುತ್ತಾನೆ. ಆದರೆ ಮರು ಘಳಿಗೆಯಲ್ಲಿ ಯೇಸು ಕ್ರಿಸ್ತರು ತಮ್ಮ ಪಾಡು ಹಾಗೂ ಮರಣದ ಕುರಿತು ಹೇಳುವಾಗ ಅದಕ್ಕೆ ಪೇತ್ರನು ನಿರಾಕರಿಸುತ್ತಾರೆ. ಆಗ, ಯೇಸು ಎಲೈ ಸೈತಾನನೇ ಇಲ್ಲಿಂದ ತೊಲಗು. ನಿನ್ನ ಈ ಯೋಚನೆ ದೇವರದ್ದಲ್ಲ ಎಂದು ಹೇಳುತ್ತಾರೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ನಾವು ಒಮ್ಮೊಮ್ಮೆ ಸರಿಯಾಗಿ ಆಲೋಚಿಸಿದರೂ ಸಹ ನಾವು ಮನುಷ್ಯರಾಗಿರುವ ಕಾರಣ ಮರುಘಳಿಗೆಯಲ್ಲಿ ನಮ್ಮ ಆಲೋಚನೆಗಳು ತಪ್ಪಾಗಬಹುದು. ಆದುದರಿಂದ ನಾವೆಲ್ಲರೂ ಪ್ರಭುವಿನ ಕುರಿತು ಸಂಪೂರ್ಣವಾದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು" ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್, "ಕೇವಲ ಕ್ರಿಸ್ತರು ಯಾರೆಂಬುದು ನಮಗೆ ತಿಳಿದರೆ ಮಾತ್ರ ಸಾಲದು ಅವರ ಹೆಜ್ಜೆಗಳಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು ಹಾಗೂ ಅವರ ಕುರಿತು ಸಂಪೂರ್ಣ ಜ್ಞಾನವುಳ್ಳವರಾಗಬೇಕು" ಎಂದು ಹೇಳಿದರು.

"ನಮಗೆ ಯೇಸು ಕ್ರಿಸ್ತರೆಂದರೆ ಯಾರು?" ಎಂಬ ಪ್ರಶ್ನೆಯನ್ನು ನಾವು ಪದೇ ಪದೇ ಕೇಳಿಕೊಳ್ಳುವ ಮೂಲಕ ಆತ್ಮವಿಮರ್ಶೆಯನ್ನು ಮಾಡಿಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.          

16 September 2024, 15:18