ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಬಲಹೀನರನ್ನು ಆರೈಕೆ ಮಾಡುವುದರಲ್ಲಿ ನಮ್ಮ ನಿಜವಾದ ಶಕ್ತಿ ಅಡಗಿದೆ
ವರದಿ: ತದ್ದೆಯಸ್ ಜೋನ್ಸ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಇಂದಿನ ಶುಭ ಸಂದೇಶದಲ್ಲಿ ಪ್ರಭು ಯೇಸುಕ್ರಿಸ್ತರು ಆಡಿರುವ ಮಾತುಗಳ ಕುರಿತು ವಿವರಣೆಯನ್ನು ನೀಡಿದ್ದಾರೆ. ತಮ್ಮ ಈ ಚಿಂತನೆಯಲ್ಲಿ ಒಬ್ಬ ಮನುಷ್ಯನ ನಿಜವಾದ ಮಹತ್ವ ಅಥವಾ ಉನ್ನತ ಯೋಗ್ಯತೆ ಎಂಬುದು ಆತನ ಶಕ್ತಿಯಲ್ಲಿ ಇಲ್ಲ ಬದಲಿಗೆ ಆತ ಹೇಗೆ ಬಲಹೀನರನ್ನು ಆರೈಕೆ ಮಾಡುತ್ತಾನೆ ಎಂಬುದರಲ್ಲಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಅಧಿಕಾರ ಅಥವಾ ಶಕ್ತಿ ಎಂದರೆ ನಮ್ಮ ದರ್ಪವನ್ನು ಚಲಾಯಿಸುವುದಲ್ಲ. ಬದಲಿಗೆ ನಮಗೆ ದೇವರು ನೀಡಿರುವ ಅವಕಾಶ ಹಾಗೂ ಅಧಿಕಾರವನ್ನು ನಮ್ಮ ಸಹೋದರ-ಸಹೋದರಿಯರ ಸೇವೆ ಮಾಡಲು ಬಳಸಿಕೊಳ್ಳುವುದಾಗಿದೆ" ಎಂದು ಹೇಳಿದರು.
ಸೇವೆ ಎಂಬುದು ಅತ್ಯುನ್ನತ ಮೌಲ್ಯಗಳಲ್ಲೊಂದಾಗಿದೆ. ಅದೇ ಸಮಯದಲ್ಲಿ ಇದು ನಮ್ಮ ಕ್ರಿಸ್ತೀಯ ಬದುಕಿನ ಬುನಾದಿಯಾಗಿದೆ ಏಕೆಂದರೆ ಪ್ರಭು ಯೇಸುಕ್ರಿಸ್ತರು ಹೇಳುವ ಪ್ರಕಾರ ಅವರು ಸೇವೆ ಮಾಡಿಸಿಕೊಳ್ಳುವುದಕ್ಕಲ್ಲ ಬದಲಿಗೆ ಸೇವೆ ಮಾಡುವುದಕ್ಕೆ. ಯೇಸು ಕ್ರಿಸ್ತರ ಹಿಂಬಾಲಕರಾಗಿರುವ ನಾವು ಸೇವೆಯಲ್ಲಿ ಅವರನ್ನು ಅನುಕರಣೆ ಮಾಡಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.