ಲಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಕ್ಕೆ ಪ್ರೇಷಿತ ಭೇಟಿಯನ್ನು ಆರಂಭಿಸಿದ ಪೋಪ್ ಫ್ರಾನ್ಸಿಸ್
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಲಕ್ಸೆಂಬರ್ಗ್ ದೇಶಕ್ಕೆ ಭೇಟಿ ನೀಡುವ ಮೂಲಕ ತಮ್ಮ 46ನೇ ಪ್ರೇಷಿತ ಪ್ರಯಾಣವನ್ನು ಆರಂಭಿಸಿದ್ದಾರೆ. ಇದರ ನಂತರ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿದ್ದರು.
ರೋಮ್ ನಗರದ ಫಿಯುಮಿಚಿನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣವನ್ನು ಆರಂಭಿಸಿದ ಪೋಪ್ ಫ್ರಾನ್ಸಿಸ್ ಅವರು ಲುಕ್ಸೆಂಬರ್ಗ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ತಮ್ಮ ಅಧಿಕೃತ ನಿವಾಸ ಕಾಸ ಸಾಂತ ಮಾರ್ತಾ ಅನ್ನು ಬಿಡುವುದಕ್ಕೂ ಮುಂಚೆ ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಚೌಕದ ಬೀದಿಗಳಲ್ಲಿ ಮಲಗುವ ಸುಮಾರು ಹತ್ತು ಜನ ನಿರಾಶ್ರಿತರ ಗುಂಪನ್ನು ಭೇಟಿ ಮಾಡಿದರು. ಪವಿತ್ರ ಪೀಠದ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ ಈ ನಿರಾಶ್ರಿತರ ಗುಂಪನ್ನು ವ್ಯಾಟಿಕನ್ನಿನ ದಾನ-ಧರ್ಮ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಕರೆ ತಂದಿದ್ದರು.
ಲಕ್ಸೆಂಬರ್ಗ್ ದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಲ್ಲಿನ ಗ್ರ್ಯಾಂಡ್ ಡ್ಯೂಕ್ ಹೆನ್ರಿ ಅವರನ್ನು ಹಾಗೂ ಆ ದೇಶದ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಆಗಮನದ ಹಿನ್ನೆಲೆ ಅಲ್ಲಿನ ಅಧಿಕಾರಿಗಳು ಸಾರ್ವಜನಿಕ ಭಾಷಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಸಹ ಇದೆ.