ಹುಡುಕಿ

ಅಧಿಕಾರಿಗಳಿಗೆ ಪೋಪ್: ಶಾಂತಿಯನ್ನು ಸ್ಥಾಪಿಸಲು ಯೂರೋಪಿಗೆ ಬೆಲ್ಜಿಯಂ ಅವಶ್ಯಕತೆ ಇದೆ

ಯೂರೋಪ್ ಖಂಡದಲ್ಲಿ ಶಾಂತಿಯನ್ನು ಸ್ಥಾಪಿಸುವ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು, ಇಲ್ಲಿನ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸುವ ಹಿನ್ನೆಲೆ ಬೆಲ್ಜಿಯಂ ದೇಶದ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಮೊದಲ ದಿನ ಇಲ್ಲಿ ಸರ್ಕಾರಿ ಅಧಿಕಾರಿಗಳನ್ನು ಹಾಗೂ ಇತರರನ್ನು ಭೇಟಿ ಮಾಡಿ, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುವ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಬೆಲ್ಜಿಯಂ ದೇಶದ ಅವಶ್ಯಕತೆ ಬಹಳ ಇದೆ ಎಂದು ಹೇಳಿದರು.

ಗಾತ್ರದಲ್ಲಿ ಚಿಕ್ಕದೇ ಆಗಿದ್ದರು, ಶಾಂತಿ ಸೌಹಾರ್ಧತೆಯನ್ನು ರೂಪಿಸುವಲ್ಲಿ ವಿವಿಧ ದೇಶಗಳಿಗೆ ಸೇತುವೆಯಾಗಲು ಬೆಲ್ಜಿಯಂ ದೇಶಕ್ಕೆ ಅವಕಾಶವಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಇನ್ನು ಧರ್ಮಸಭೆಯಲ್ಲಿ ಈವರೆಗೂ ನಡೆದ ಲೈಂಗಿಕ ಶೋಷಣೆಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಧರ್ಮಸಭೆಗ ಗುರುಗಳಿಂದಲೂ ಸಹ ಜನತೆಗೆ ಗಾಯಗಳಾಗಿವೆ. ಇವೆಲ್ಲವೂ ಧರ್ಮಸಭೆಯ ಅವಮಾನಗಳಾಗಿವೆ ಎಂದು ಪೋಪ್ ಫ್ರಾನ್ಸಿಸ್ ಚರ್ಚಿನ ಲೈಂಗಿಕ ಹಗರಣಗಳ ಕುರಿತು ಮಾತನಾಡಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಇತಿಹಾಸದಿಂದ ನಾವು ಪಾಠ ಕಲಿಯಬೇಕಿದೆ" ಎಂದು ಹೇಳಿದರು.

27 September 2024, 15:20