ಹುಡುಕಿ

Pope Francis visits Belgium

ಧಾರ್ಮಿಕ ಲೈಂಗಿಕ ದೌರ್ಜನ್ಯದ ಸಂತ್ರಸ್ಥರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿದ ಮೊದಲನೇ ದಿನ ಧರ್ಮಸಭೆಯ ಗುರುಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರನ್ನು ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದಾರೆ. ಮೊದಲನೇ ದಿನವನ್ನು ಸಂಪೂರ್ಣಗೊಳಿಸಿರುವ ಪೋಪ್ ಫ್ರಾನ್ಸಿಸ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಪ್ರಮುಖ ಕಾರ್ಯಕ್ರಮವೆಂದರೆ ಅವರು ಬೆಲ್ಜಿಯಂ ದೇಶದಲ್ಲಿ ಗುರುಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ಥರನ್ನು ಭೇಟಿ ಮಾಡಿದ್ದಾರೆ.

ಸುಮಾರು ಹದಿನೇಳು ಜನ ಲೈಂಗಿಕ ದೌರ್ಜನ್ಯ ಸಂತ್ರಸ್ಥರನ್ನು ಪೋಪ್ ಫ್ರಾನ್ಸಿಸ್ ಅವರು ಭೇಟಿ ಮಾಡಿದ್ದಾರೆ.

ವ್ಯಾಟಿಕನ್ ಮಾಧ್ಯಮ ಕಚೇರಿಯು ಈ ಮಾಹಿತಿಯನ್ನು ಟೆಲಿಗ್ರಾಂ ಅಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಅವರನ್ನು ಭೇಟಿ ಮಾಡಿದ ನಂತರ ತಾವು ತಂಗಿರುವ ಪ್ರೇಷಿತ ರಾಯಭಾರಿಗೆ ಹಿಂತಿರುಗಿದರು.

ಪೋಪ್ ಫ್ರಾನ್ಸಿಸ್ ಅವರು ಈ ಸಂತ್ರಸ್ಥರೊಂದಿಗೆ ಎರಡು ಗಂಟೆಗಳಿಗೂ ಅಧಿಕ ಚರ್ಚಿಸಿದರು. ಈ ವೇಳೆ ಸಂತ್ರಸ್ಥರು ಅವರ ಕಥಾನಕಗಳನ್ನು ಪೋಪ್ ಫ್ರಾನ್ಸಿಸ್ ಅವರ ಬಳಿ ಹೇಳಿಕೊಂಡರು. ಪೋಪ್ ಫ್ರಾನ್ಸಿಸ್ ಅವರು ಇವರ ಕಥೆಗಳನ್ನು ಕೇಳಿಸಿಕೊಂಡು, ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿ, ಅವರನ್ನು ಸಮಾಧಾನಿಸಿದರು.

28 September 2024, 16:26