ಬೆಲ್ಜಿಯಂ ಗುರುಗಳಿಗೆ ಪೋಪ್: ಕರುಣೆ ಮತ್ತು ಸಂತೋಷ ನಿಮ್ಮ ಪಾಲನಾ ಸೇವೆಯನ್ನು ತುಂಬಬೇಕು

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿದ ಎರಡನೇ ದಿನ ಅಲ್ಲಿನ ಗುರುಗಳನ್ನು ಭೇಟಿ ಮಾಡಿದ್ದಾರೆ. ಎಲ್ಲರೂ ಸಹ ಶುಭಸಂದೇಶದ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಎರಡನೇ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ದಾರೆ. ಇಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಅವರು ಬೆಲ್ಜಿಯಂ ದೇಶದ ಗುರುಗಳನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.

ಬೆಲ್ಜಿಯಂ ದೇಶದ ಗುರುಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಾವೆಲ್ಲರೂ ಶುಭ ಸಂದೇಶದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಕರುಣೆ ಹಾಗೂ ಸಂತೋಷದಂತಹ ಮೌಲ್ಯಗಳು ನಿಮ್ಮ ಪಾಲನಾ ಸೇವೆಯನ್ನು ತುಂಬಿಕೊಳ್ಳಬೇಕು." ಎಂದು ಹೇಳಿದ್ದಾರೆ.

ಶುಭಸಂದೇಶ ಪ್ರಸಾರದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಾವೆಲ್ಲರೂ ಸಹ ಶುಭ ಸಂದೇಶವನ್ನು ನಮ್ಮ ಪ್ರಬೋಧನೆಗಳಲ್ಲಿ ಮಾತನಾಡುವುದು ಮಾತ್ರವಲ್ಲದೆ ನಮ್ಮ ಎಲ್ಲಾ ಕಾರ್ಯಗಳಲ್ಲಿ ನಾವು ಶುಭ ಸಂದೇಶವನ್ನು ಸಾರಬೇಕು ಎಂದು ಹೇಳಿದ್ದಾರೆ.

     

28 September 2024, 16:51