ಹುಡುಕಿ

ನಿರಾಶ್ರಿತರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್; ಅರಸ ಬೌದೆನ್'ಗೆ ಗೌರವ ಸಲ್ಲಿಸಿದರು

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದಾರೆ. ಈ ವೇಳೆ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಇಲ್ಲಿನ ನಿರಾಶ್ರಿತರ ಗುಂಪನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಅವರು ಬೆಲ್ಜಿಯಂ ದೇಶದ ಹಿಂದಿನ ಅರಸ ಬೌದೆನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಬೆಲ್ಜಿಯಂ ದೇಶದ ಪ್ರೇಷಿತ ರಾಯಭಾರ ಕಚೇರಿಯಿಂದ ಹೊರಡುವುದಕ್ಕೆ ಮುಂಚೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಯುರೋಪಿಯನ್ ಯೂನಿಯನ್ ಅಧಿಕಾರಿಗಳನ್ನು ಭೇಟಿ ಮಾಡಿದರು. ಅವರು ಬೆಲ್ಜಿಯಂ ದೇಶದ ಕಥೋಲಿಕ ಧರ್ಮಾಧ್ಯಕ್ಷರು ಹಾಗೂ ಗುರುಗಳನ್ನು ಭೇಟಿ ಮಾಡಲು ಹೊರಟಿದ್ದರು.

ಪ್ರೇಷಿತ ರಾಯಭಾರ ಕಚೇರಿಯ ಬಳಿ ಅವರನ್ನು ಭೇಟಿ ಮಾಡಲು ನೆರೆದಿದ್ದ ಜನತೆಯನ್ನು ನೋಡಿದ ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಶುಭಾಶಯಗಳನ್ನು ತಿಳಿಸಿದರು ಮಾತ್ರವಲ್ಲದೆ ಆಶೀರ್ವಾದವನ್ನು ನೀಡಿದರು. ಇಲ್ಲಿ ಯೇಸುವಿನ ಪವಿತ್ರ ಹೃದಯದ ಬಸಿಲಿಕಾ ದೇವಾಲಯಕ್ಕೆ ಭೇಟಿ ನೀಡುವ ಮುನ್ನ, ಸ್ಥಳೀಯ ಚರ್ಚ್ ಒಂದಕ್ಕೆ ಉಪಹಾರ ಸೇವಿಸಲು ಹೊರಟ ಪೋಪ್ ಫ್ರಾನ್ಸಿಸ್ ಅವರು ಈ ದೇವಾಲಯದ ಉಸ್ತುವಾರಿಯಲ್ಲಿದ್ದ ಹಲವು ನಿರಾಶ್ರಿತರನ್ನು ಭೇಟಿ ಮಾಡಿ ಅವರ ಜೊತೆ ಉಪಹಾರವನ್ನು ಸೇವಿಸಿದ್ದಾರೆ.

ಇದಾದ ನಂತರ ಅವರು ಬೆಲ್ಜಿಯಂ ದೇಶದ ಅರಮನೆಗೆ ಭೇಟಿ ನೀಡಿದ್ದು, ಅಲ್ಲಿನ ಅರಸ ಹಾಗೂ ರಾಣಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬೆಲ್ಜಿಯಂ ದೇಶದ ಹಿಂದಿನ ರಾಜ ಬೌದಿನ್ ಅವರನ್ನು ಶ್ಲಾಘಿಸಿ, ಅವರಿಗೆ ಗೌರವವನ್ನು ಅರ್ಪಿಸಿದ್ದಾರೆ ಎಂದು ವರದಿಯಾಗಿದೆ.   

28 September 2024, 17:48