ಬ್ರಸ್ಸೆಲ್ಸ್ ನಗರದಲ್ಲಿ ಬಲಿಪೂಜೆ: ಹಗರಣವನ್ನು ಎಂದಿಗೂ ಬಚ್ಚಿಡಬೇಡಿ ಎಂದು ಹೇಳಿದ ಪೋಪ್ ಫ್ರಾನ್ಸಿಸ್
ವರದಿ: ಡಿವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಮ್ ದೇಶಕ್ಕೆ ಎರಡು ದಿನಗಳ ಹಿಂದೆ ಪ್ರೇಷಿತ ಭೇಟಿಯನ್ನು ನೀಡಿದ್ದರು. ಈ ಭೇಟಿಯ ವೇಳೆ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದೀಗ ಅವರು ಕೊನೆಯದಾಗಿ ಬೆಲ್ಜಿಯಂ ದೇಶದ ರಾಜಧಾನಿ ಬ್ರೆಸಲ್ಸ್ ನಗರದಲ್ಲಿ ಸಾರ್ವಜನಿಕ ಬಲಿ ಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಹಗರಣವನ್ನು ಎಂದಿಗೂ ಬಚ್ಚಿಡಬಾರದು ಎಂದು ಹೇಳಿದ್ದಾರೆ.
ಇದೆ ವೇಳೆ ಪೋಪ್ ಫ್ರಾನ್ಸಿಸ್ ಅವರು ಸ್ಪೇನ್ ದೇಶದ ಧಾರ್ಮಿಕ ಸಹೋದರಿ ಆನ್ ಆಫ್ ಜೀಸಸ್ ಎಂಬವರನ್ನು ಪುನೀತರ ಪದವಿಗೆರಿಸಿದ್ದಾರೆ. ಇವರು 17ನೇ ಶತಮಾನದಲ್ಲಿ ಬೆಲ್ಜಿಯಂ ದೇಶದಲ್ಲಿನ ಕಾರ್ಮೆಲೈಟ್ ಸಭೆಯನ್ನು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಗುರುಗಳಿಂದ ನಡೆದಿರುವ ಲೈಂಗಿಕ ಹಗರಣಗಳಿಗೆ ಧರ್ಮಸಭೆ ನಾಚಿಕೆ ಪಡುವಂತಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಯಾವುದೇ ಸಂದರ್ಭದಲ್ಲಿ ಹಗರಣಗಳು ನಡೆದಾಗ ಅವುಗಳನ್ನು ಯಾವುದೇ ಕಾರಣಕ್ಕೂ ಬಚ್ಚಿಡಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು "ನಮ್ಮ ಬದುಕಿನಲ್ಲಿ ನಾವು ಸದಾ ಪವಿತ್ರಾತ್ಮರ ಆಹ್ವಾನಕ್ಕೆ ಕಾತುರತೆಯಿಂದ ಕಾಯಬೇಕು. ಅವರಿಂದ ಆಹ್ವಾನ ಬಂದ ತಕ್ಷಣ ನಾವು ಒಪ್ಪಿಕೊಂಡು, ಪ್ರಭುವಿನ ಮಾರ್ಗದಲ್ಲಿ ಮುನ್ನಡೆಯಬೇಕು" ಎಂದು ಹೇಳಿದರು.