ಲೆಬನಾನ್, ಗಾಝಾ, ಪ್ಯಾಲೆಸ್ತೇನ್, ಇಸ್ರೇಲ್ ದೇಶಗಳಲ್ಲಿ ಕದನ ವಿರಾಮಕ್ಕೆ ವಿನಂತಿಸಿದ ಪೋಪ್ ಫ್ರಾನ್ಸಿಸ್
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಬ್ರಸೆಲ್ಸ್ ನಗರಲ್ಲಿ ಅವರ ಪ್ರೇಷಿತ ಭೇಟಿಯ ಕೊನೆಯ ದಿನ ಬಲಿಪೂಜೆಯನ್ನು ಅರ್ಪಿಸಿದರು. ಈ ಬಲಿಪೂಜೆಗೆ ಸಾವಿರಾರು ಜನರು ಆಗಮಿಸಿದ್ದು, ಪ್ರಬೋಧನೆಯ ವೇಳೆ ಅವರು ಲೆಬನಾನ್, ಗಾಝಾ, ಪ್ಯಾಲೆಸ್ತೇನ್, ಇಸ್ರೇಲ್ ದೇಶಗಳಲ್ಲಿ ಕದನ ವಿರಾಮಕ್ಕೆ ವಿನಂತಿಸಿದ್ದಾರೆ.
ಬಲಿಪೂಜೆಯ ಪ್ರಬೋಧನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಗುರುಗಳು ಮಾಡಿರುವ ಲೈಂಗಿಕ ಹಗರಣಗಳ ಕುರಿತು ಪ್ರಸ್ತಾಪಿಸಿ, ಅದು ಧರ್ಮಸಭೆಯು ನಾಚಿಕೆಪಟ್ಟುಕೊಳ್ಳುವಂತಹ ಸಂಗತಿ ಎಂದು ಹೇಳಿ, ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಸಾಂಪ್ರದಾಯಿಕ ಮನವಿಯಾದ ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯ ಕುರಿತು ಮಾತನಾಡಿದರು.
"ಇದೀಗ ಗಾಝಾ ಹಾಗೂ ಲೆಬಾನನ್ ದೇಶಗಳಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ಬಿರುಸಾಗಿದ್ದು, ಯುದ್ಧದಿಂದ ಬವಣೆಗೆ ಒಳಗಾಗುವವರು ಬಡವರು, ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ. ತಮ್ಮದಲ್ಲದ ತಪ್ಪಿಗೆ ಅವರು ಶಿಕ್ಷೆಯನ್ನು ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತದನಂತರ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಬ್ರಸೆಲ್ಸ್ ನಗರದಿಂದ ರೋಮ್ ನಗರಕ್ಕೆ ವಿಮಾನದಲ್ಲಿ ನಿರ್ಗಮಿಸಿದರು.