ಸಿಂಗಪೋರ್ ದೇಶದಲ್ಲಿ ಪೋಪ್ ಫ್ರಾನ್ಸಿಸ್ ಭೇಟಿಯ ಮೊದಲ ದಿನ

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯನ್ನು ನೀಡಿದ್ದು, ಮೊದಲ ದಿನ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಅರ್ಪಿಸುವ ಬಲಿಪೂಜೆಯಲ್ಲಿ ಭಾಗವಹಿಸಲು ವೈವಿಧ್ಯಮಯ ಜನತೆ ಇರುವ ಸಿಂಗಪೋರ್ ನಂತಹ ದೇಶ ಮತ್ತೊಂದಿಲ್ಲ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯನ್ನು ನೀಡಿದ್ದು, ಮೊದಲ ದಿನ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಅರ್ಪಿಸುವ ಬಲಿಪೂಜೆಯಲ್ಲಿ ಭಾಗವಹಿಸಲು ವೈವಿಧ್ಯಮಯ ಜನತೆ ಇರುವ ಸಿಂಗಪೋರ್ ನಂತಹ ದೇಶ ಮತ್ತೊಂದಿಲ್ಲ.

ಸಿಂಗಪೋರ್ ದೇಶವು ಹಲವಾರು ವಿಧದ ಆರ್ಕಿಡ್ ಹೂವುಗಳಿಗೆ ಹೆಸರುವಾಸಿಯಾಗಿದ್ದು, ಪೋಪ್ ಫ್ರಾನ್ಸಿಸ್ ಅವರು ಭೇಟಿಯ ಹಿನ್ನೆಲೆ, ಸಿಂಗಪೋರ್ ದೇಶದ ಅಧ್ಯಕ್ಷರು ಇಲ್ಲಿನ ಅತ್ಯುತ್ತಮ ಆರ್ಕಿಡ್ ಪ್ರಬೇಧಕ್ಕೆ "ಡೆಂಡ್ರೋಬಿಯುಮ್ ಹಿಸ್ ಹೋಲಿನೆಸ್ ಪೋಪ್ ಫ್ರಾನ್ಸಿಸ್" ಎಂದು ನಾಮಕರಣ ಮಾಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಹೆಸರಿನಂತೆ ನಾಮಾಂಕಿತವಾಗಿರುವ ಈ ಹೂವು ಅತ್ಯಂತ ಸುಮಧರ ಸುವಾಸನೆಯನ್ನು ಬೀರುವಂತದ್ದಾಗಿದ್ದು, ದಂತವರ್ಣದ ಪಕಳೆಗಳನ್ನು ಹೊಂದಿದ್ದು, ಮಧ್ಯಭಾಗದಲ್ಲಿ ಚಿನ್ನದ ಬಣ್ಣವನ್ನು ಸೂಸಿದೆ.

ಪೋಪ್ ಫ್ರಾನ್ಸಿಸ್ ಅವರು ಈ ಭೇಟಿಯ ನಂತರ ಬಲಿಪೂಜೆಯನ್ನು ಅರ್ಪಿಸಿದರು. ಅವರ ಬಲಿಪೂಜೆಗಾಗಿ ಸುಮಾರು ಐವತ್ತು ಸಾವಿರ ಜನರು ಬಂದು ನೆರೆದಿದ್ದರು. ಇವರಲ್ಲಿ ಬಹುತೇಕರು ಕಥೋಲಿಕರಾದರೂ ಸಹ, ವಿವಿಧ ಧರ್ಮಗಳ ಅನೇಕ ಸದುದ್ಧೇಶದ ಜನರೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬಂದಿದ್ದರು.

12 September 2024, 17:46