ಹುಡುಕಿ

ಬಲಿಪೂಜೆಯಲ್ಲಿ ಪೋಪ್ ಫ್ರಾನ್ಸಿಸ್: ಪ್ರೀತಿಯೇ ಶುಭಸಂದೇಶದ ಕೇಂದ್ರಬಿಂದುವಾಗಿದೆ

ಸಿಂಗಪೋರ್ ದೇಶದ ನ್ಯಾಷನಲ್ ಸ್ಟೇಡಿಯಂನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಪ್ರೀತಿಯೇ ನಾವು ಮಾಡುವ ಎಲ್ಲಾ ಸತ್ಕಾರ್ಯಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಸಿಂಗಪೋರ್ ದೇಶದ ನ್ಯಾಷನಲ್ ಸ್ಟೇಡಿಯಂನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಪ್ರೀತಿಯೇ ನಾವು ಮಾಡುವ ಎಲ್ಲಾ ಸತ್ಕಾರ್ಯಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಬಲಿಪೂಜೆಯನ್ನು ಕಣ್ತುಂಬಿಕೊಳ್ಳಲು ಸುಮಾರು ಐವತ್ತು ಸಾವಿರ ಜನರು ಬಂದು ನೆರೆದಿದ್ದರು. ಇವರಲ್ಲಿ ಬಹುತೇಕರು ಕಥೋಲಿಕರಾದರೂ ಸಹ, ವಿವಿಧ ಧರ್ಮಗಳ ಅನೇಕ ಸದುದ್ಧೇಶದ ಜನರೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬಂದಿದ್ದರು.

ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ಶುಭ ಸಂದೇಶದ ಮೇಲೆ ಚಿಂತನೆಯನ್ನು ನಡೆಸುತ್ತಾ ಮಾತನಾಡಿ, ಜನರು ಸಾಧಿಸುವ ಅನೇಕ ಮಹತ್ಕಾರ್ಯಗಳ ಬುನಾದಿ ಹಣ, ಅಧಿಕಾರ ಅಥವಾ ತಂತ್ರಜ್ಞಾನವಲ್ಲ. ಬದಲಿಗೆ ಇವೆಲ್ಲವುಗಳ ಬುನಾದಿ ಹಾಗೂ ತಳಹದಿ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಈ ನಮ್ಮ ಪ್ರೀತಿಯ ಮೂಲ ದೇವರಾಗಿದ್ದಾರೆ. ಅವರಿಂದಲೇ ಪ್ರೀತಿ ಉದ್ಭವವಾಗಿದ್ದು, ಪ್ರೀತಿಯ ಬುಗ್ಗೆಯೇ ಅವರಾಗಿದ್ದಾರೆ. ಆದುದರಿಂದ ಪ್ರಭು ಕ್ರಿಸ್ತರ ಶುಭಸಂದೇಶದ ಕೇಂದ್ರಬಿಂದುವೇ ಪ್ರೀತಿಯಾಗಿದೆ ಎಂದು ಅವರು ಹೇಳಿದರು.

12 September 2024, 17:49