ಹುಡುಕಿ

ಪೋಪ್ ಫ್ರಾನ್ಸಿಸ್: ಮಾನವರು ಏನು ಸಾಧಿಸಬಹುದು ಎಂಬುದಕ್ಕೆ ಸಿಂಗಾಪೋರ್ ಜ್ವಲಂತ ಉದಾಹರಣೆ

ಪೋಪ್ ಫ್ರಾನ್ಸಿಸ್ ಅವರು ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣದಲ್ಲಿ ನಾಲ್ಕು ದೇಶಗಳಿಗೆ ಸರಣಿ ಪ್ರೇಷಿತ ಭೇಟಿಯನ್ನು ನೀಡಿದರು. ಇಂಡೋನೇಷಿಯಾ, ಪಪುವಾ ನ್ಯೂಗಿನಿ ಮತ್ತು ಟಿಮೋರ್ ಲೆಸ್ಟೆ ದೇಶಗಳಿಗೆ ಭೇಟಿ ನೀಡಿದ ನಂತರ ಅಂತಿಮವಾಗಿ ಸಿಂಗಪೋರ್ ದೇಶಕ್ಕೆ ಭೇಟಿ ನೀಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯನ್ನು ನೀಡಿದ್ದು, ಮೊದಲ ದಿನ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ವರದಿ: ಫ್ರಾನ್ಚೆಸ್ಕಾ ಮೆರ್ಲೋ, ಅಜಯ್ ಕುಮಾರ್

ಸಿಂಗಪೋರ್ ದೇಶದ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸರ್ವಧರ್ಮಮಸಮಾನತೆ ಹಾಗೂ ಸಹಿಷ್ಣುತೆಯನ್ನು ಹೊಗಳಿದ್ದಾರೆ. ಪ್ರಾಕೃತಿಕ ಆಯಾಮವನ್ನೂ ಒಳಗೊಂಡತೆ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಹೊಂದಿರುವ ಸಿಂಗಪೋರ್ ದೇಶದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಈ ದೇಶವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಶ್ಲಾಘಿಸಿರುವ ಪೋಪ್ ಫ್ರಾನ್ಸಿಸ್ ಅವರು ಮಾನವರು ಏನು ಸಾಧಿಸಬಹುದು ಎಂಬುದಕ್ಕೆ ಸಿಂಗಪೋರ್ ಜ್ವಲಂತ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಸಿಂಗಾಪೋರ್ ದೇಶವು ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲೂ ಸಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡಿದೆ ಮಾತ್ರವಲ್ಲದೆ; ಪ್ರಕೃತಿಯನ್ನೂ ಸಹ ಗೌರವಿಸಿ, ಅದನ್ನು ಅತ್ಯಂತ ಉಗ್ರವಾಗಿ ಬಳಸಿಕೊಳ್ಳದೆ, ನಮ್ಮ ಸಾಮಾನ್ಯ ಮನೆಯಾದ ಅದರ ಕುರಿತೂ ಸಹ ಕಾಳಜಿಯನ್ನು ವ್ಯಕ್ತಪಡಿಸಿದೆ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಸಿಂಗಾಪೋರ್ ದೇಶವನ್ನು ಹೊಗಳಿದ್ದಾರೆ.

12 September 2024, 17:52