ಹುಡುಕಿ

ಅಂತರ್-ಧರ್ಮೀಯ ಸಂವಾದದಲ್ಲಿ ಒಗ್ಗಟ್ಟಿನ ಕುರಿತು ಯುವ ಜನತೆಗೆ ಹೇಳಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶದಲ್ಲಿ ಅಂತರ್-ಧರ್ಮೀಯ ಸಂವಾದದಲ್ಲಿ ಭಾಗವಹಿದ್ದಾರೆ. ಈ ವೇಳೆ ಅವರು ದೇಶದ ಯವ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಅವರಿಗೆ ಒಗ್ಗಟ್ಟಿನ ಕುರಿತು ಮಾತನಾಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶದಲ್ಲಿ ಅಂತರ್-ಧರ್ಮೀಯ ಸಂವಾದದಲ್ಲಿ ಭಾಗವಹಿದ್ದಾರೆ. ಈ ವೇಳೆ ಅವರು ದೇಶದ ಯವ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಅವರಿಗೆ ಒಗ್ಗಟ್ಟಿನ ಕುರಿತು ಮಾತನಾಡಿದ್ದಾರೆ.

ಸಿಂಗಪೋರ್ ಬಹುತೇಕ ಚೀನಿ ಬಾಹುಳ್ಯವುಳ್ಳ ದೇಶವಾಗಿದ್ದು, ಇಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಂತರ್-ಧರ್ಮೀಯ ಸಂವಾದಲ್ಲಿ ಭಾಗವಹಿಸಿದ್ದಾರೆ. ಇಂದು ಅವರ ವಿದೇಶದ ಪ್ರಯಾಣದ ಹೃದಯಭಾಗವಾಗಿರುವ ಈ ಸಂವಾದದಲ್ಲಿ ಐಕ್ಯತೆ, ಸಮಗ್ರತೆಯ ಕುರಿತು ಮಾತನಾಡಿದರು. ಇಲ್ಲಿ ಧಾರ್ಮಿಕ ವೈವಿಧ್ಯತೆ ಹೇಗಿದೆ ಎಂದರೆ ಕ್ರೈಸ್ತರು ಹಾಗೂ ವಿವಿಧ ಧರ್ಮಗಳ ನಡುವೆ ಮದುವೆಗಳು ಸಹಜವಾಗಿವೆ ಹಾಗೂ ಇವರ ಮಕ್ಕಳು ಗುರುಗಳಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ವಿವಿಧ ಧರ್ಮಗಳ ವ್ಯಕ್ತಿಗಳ ಕಥಾನಕಗಳನ್ನು ಆಲಿಸಿದ್ದಾರೆ ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸಿ, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.

13 September 2024, 18:45