ಹುಡುಕಿ

ಸಿಂಗಪೋರ್ ದೇಶಕ್ಕೆ ಪ್ರೇಷಿತ ಪ್ರಯಾಣವನ್ನು ಮುಕ್ತಾಯಗೊಳಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಪ್ರಯಾಣವನ್ನು ಇಂದು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಅವರು ತಮ್ಮ ಪೋಪಾಧಿಕಾರದ ನಲವತ್ತೈದನೇಯ ಪ್ರೇಷಿತ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಪ್ರೇಷಿತ ಭೇಟಿಯಲ್ಲಿ ಅವರು ನಾಲ್ಕು ದೇಶಗಳನ್ನು ಭೇಟಿ ಮಾಡಿದ್ದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಪ್ರಯಾಣವನ್ನು ಇಂದು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಅವರು ತಮ್ಮ ಪೋಪಾಧಿಕಾರದ ನಲವತ್ತೈದನೇಯ ಪ್ರೇಷಿತ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಪ್ರೇಷಿತ ಭೇಟಿಯಲ್ಲಿ ಅವರು ನಾಲ್ಕು ದೇಶಗಳನ್ನು ಭೇಟಿ ಮಾಡಿದ್ದರು.  

ಪೋಪ್ ಫ್ರಾನ್ಸಿಸ್ ಅವರ ಸಿಂಗಪೋರ್ ಭೇಟಿಯ ಮುಖ್ಯಾಂಶಗಳು

ಪೋಪ್ ಫ್ರಾನ್ಸಿಸ್ ಅವರು ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣದಲ್ಲಿ ನಾಲ್ಕು ದೇಶಗಳಿಗೆ ಸರಣಿ ಪ್ರೇಷಿತ ಭೇಟಿಯನ್ನು ನೀಡಿದರು. ಇಂಡೋನೇಷಿಯಾ, ಪಪುವಾ ನ್ಯೂಗಿನಿ ಮತ್ತು ಟಿಮೋರ್ ಲೆಸ್ಟೆ ದೇಶಗಳಿಗೆ ಭೇಟಿ ನೀಡಿದ ನಂತರ ಅಂತಿಮವಾಗಿ ಸಿಂಗಪೋರ್ ದೇಶಕ್ಕೆ ಭೇಟಿ ನೀಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಸಿಂಗಪೋರ್ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯನ್ನು ನೀಡಿದ್ದು, ಮೊದಲ ದಿನ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಸಿಂಗಪೋರ್ ದೇಶದ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸರ್ವಧರ್ಮ ಸಮಾನತೆ ಹಾಗೂ ಸಹಿಷ್ಣುತೆಯನ್ನು ಹೊಗಳಿದ್ದಾರೆ. ಪ್ರಾಕೃತಿಕ ಆಯಾಮವನ್ನೂ ಒಳಗೊಂಡತೆ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಹೊಂದಿರುವ ಸಿಂಗಪೋರ್ ದೇಶದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಈ ದೇಶವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಶ್ಲಾಘಿಸಿರುವ ಪೋಪ್ ಫ್ರಾನ್ಸಿಸ್ ಅವರು ಮಾನವರು ಏನು ಸಾಧಿಸಬಹುದು ಎಂಬುದಕ್ಕೆ ಸಿಂಗಪೋರ್ ಜ್ವಲಂತ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಸಿಂಗಾಪೋರ್ ದೇಶವು ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲೂ ಸಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡಿದೆ ಮಾತ್ರವಲ್ಲದೆ; ಪ್ರಕೃತಿಯನ್ನೂ ಸಹ ಗೌರವಿಸಿ, ಅದನ್ನು ಅತ್ಯಂತ ಉಗ್ರವಾಗಿ ಬಳಸಿಕೊಳ್ಳದೆ, ನಮ್ಮ ಸಾಮಾನ್ಯ ಮನೆಯಾದ ಅದರ ಕುರಿತೂ ಸಹ ಕಾಳಜಿಯನ್ನು ವ್ಯಕ್ತಪಡಿಸಿದೆ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಸಿಂಗಾಪೋರ್ ದೇಶವನ್ನು ಹೊಗಳಿದ್ದಾರೆ.

ಸೀಂಗಪೋರ್ - ಪ್ರಾಕೃತಿಕ ವೈಭವ

ಸಿಂಗಪೋರ್ ದೇಶದ ನ್ಯಾಷನಲ್ ಸ್ಟೇಡಿಯಂನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಪ್ರೀತಿಯೇ ನಾವು ಮಾಡುವ ಎಲ್ಲಾ ಸತ್ಕಾರ್ಯಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಬಲಿಪೂಜೆಯನ್ನು ಕಣ್ತುಂಬಿಕೊಳ್ಳಲು ಸುಮಾರು ಐವತ್ತು ಸಾವಿರ ಜನರು ಬಂದು ನೆರೆದಿದ್ದರು. ಇವರಲ್ಲಿ ಬಹುತೇಕರು ಕಥೋಲಿಕರಾದರೂ ಸಹ, ವಿವಿಧ ಧರ್ಮಗಳ ಅನೇಕ ಸದುದ್ಧೇಶದ ಜನರೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬಂದಿದ್ದರು.

ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ಶುಭ ಸಂದೇಶದ ಮೇಲೆ ಚಿಂತನೆಯನ್ನು ನಡೆಸುತ್ತಾ ಮಾತನಾಡಿ, ಜನರು ಸಾಧಿಸುವ ಅನೇಕ ಮಹತ್ಕಾರ್ಯಗಳ ಬುನಾದಿ ಹಣ, ಅಧಿಕಾರ ಅಥವಾ ತಂತ್ರಜ್ಞಾನವಲ್ಲ. ಬದಲಿಗೆ ಇವೆಲ್ಲವುಗಳ ಬುನಾದಿ ಹಾಗೂ ತಳಹದಿ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಭೇಟಿಗಳು

ಪೋಪ್ ಫ್ರಾನ್ಸಿಸ್ ಅವರು ಇದೇ ವೇಳೆ ಸಿಂಗಪೋರ್ ದೇಶದ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿ ಸೇರಿದಂತೆ ಸರ್ಕಾರದ ವಿವಿಧ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅಂತರ್-ಧರ್ಮೀಯ ಸಂವಾದದ ನಿಟ್ಟಿನಲ್ಲಿ ಇಲ್ಲಿ ವಿವಿಧ ಧರ್ಮಗಳ ಗುರುಗಳು ಹಾಗೂ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಹಾಗೂ ಮಾತುಕತೆಯನ್ನು ನಡೆಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಈ ದೇಶದ ಧರ್ಮಾಧ್ಯಕ್ಷರುಗಳು, ಗುರುಗಳು, ಸೇವಾದರ್ಶಿಗಳು, ಧಾರ್ಮಿಕ ಭಗಿನಿಯರು ಹಾಗೂ ಸಹೋದರ-ಸಹೋದರಿಯರನ್ನು ಉದ್ದೇಶಿಸಿ ಸಹ ಮಾತನಾಡಿದ್ದಾರೆ.

 

 

13 September 2024, 19:13