ಹುಡುಕಿ

ಇಂಡೋನೇಶಿಯಾ ಮತ್ತು ಒಶಿಯಾನಿಯಾ ದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತೆ ಮರಿಯಮ್ಮನವರಿಗೆ ಧನ್ಯವಾದ ಅರ್ಪಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಈ ತಿಂಗಳ ಆರಂಭದಲ್ಲಿ ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ಟೆ ಹಾಗೂ ಸಿಂಗಪೋರ್ ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದರು. ಹದಿನೈದು ದಿನಗಳ ಪ್ರೇಷಿತ ಪ್ರಯಾಣವನ್ನು ಮುಗಿಸಿ, ಸುರಕ್ಷಿತವಾಗಿ ವ್ಯಾಟಿಕನ್ ನಗರಕ್ಕೆ ಅವರು ಮರಳಿದ ಹಿನ್ನೆಲೆ, ಸಂಪ್ರದಾಯದಂತೆ ಅವರು ರೋಮ್ ನಗರದ ಸೇಂಟ್ ಮೇರಿ ಮೇಜರ್ ಮಹಾ ದೇವಾಲಯಕ್ಕೆ ಭೇಟಿ ನೀಡಿ, ಮಾತೆ ಮರಿಯಮ್ಮನವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಈ ತಿಂಗಳ ಆರಂಭದಲ್ಲಿ ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ಟೆ ಹಾಗೂ ಸಿಂಗಪೋರ್ ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದರು. ಹದಿನೈದು ದಿನಗಳ ಪ್ರೇಷಿತ ಪ್ರಯಾಣವನ್ನು ಮುಗಿಸಿ, ಸುರಕ್ಷಿತವಾಗಿ ವ್ಯಾಟಿಕನ್ ನಗರಕ್ಕೆ ಅವರು ಮರಳಿದ ಹಿನ್ನೆಲೆ, ಸಂಪ್ರದಾಯದಂತೆ ಅವರು ರೋಮ್ ನಗರದ ಸೇಂಟ್ ಮೇರಿ ಮೇಜರ್ ಮಹಾ ದೇವಾಲಯಕ್ಕೆ ಭೇಟಿ ನೀಡಿ, ಮಾತೆ ಮರಿಯಮ್ಮನವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗ್ರೆಗೋರಿಯನ್ ಪ್ರಾರ್ಥನಾಲಯದ ಪೀಠದ ಮೇಲೆ ಹೂಗುಚ್ಛವನ್ನು ಇರಿಸಿದ ಪೋಪ್ ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ರಕ್ಷಣೆಗಾಗಿ ಧನ್ಯವಾದವನ್ನು ಅರ್ಪಿಸಿದ್ದಾರೆ.

ತದ ನಂತರ ಅವರು ಕಾರಿನ ಮೂಲಕ ವ್ಯಾಟಿಕನ್ನಿನ ತಮ್ಮ ನಿವಾಸ ಕಾಸಾ ಸಾಂತ ಮಾರ್ತಕ್ಕೆ ಹಿಂತಿರುಗಿದರು.

ಈ ತಿಂಗಳ ಆರಂಭದಲ್ಲಿ ಅವರು ಕೈಗೊಂಡ ಪ್ರೇಷಿತ ಪ್ರಯಾಣ ಅವರ ಪೋಪಾಧಿಕಾರದ ಸುಧೀರ್ಘ ಪ್ರಯಾಣವಾಗಿದೆ.

14 September 2024, 11:29