ತಮ್ಮ 45ನೇ ಪ್ರೇಷಿತ ಭೇಟಿಯನ್ನು ಆರಂಭಿಸಿದ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ತೆ, ಹಾಗೂ ಸಿಂಗಪೋರ್ ದೇಶಗಳಿಗೆ ತಮ್ಮ 45ನೇ ಭೇಟಿಯನ್ನು ಕೈಗೊಂಡಿದ್ದಾರೆ. ಪೋಪರ ವಿಮಾನವು ರೋಮ್ ನಗರದ ಫಿಯುಮಿಚಿನೋ ವಿಮಾನ ನಿಲ್ದಾಣದಿಂದ ಹೊರಟಿದೆ.
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ತೆ, ಹಾಗೂ ಸಿಂಗಪೋರ್ ದೇಶಗಳಿಗೆ ತಮ್ಮ 45ನೇ ಭೇಟಿಯನ್ನು ಕೈಗೊಂಡಿದ್ದಾರೆ. ಪೋಪರ ವಿಮಾನವು ರೋಮ್ ನಗರದ ಫಿಯುಮಿಚಿನೋ ವಿಮಾನ ನಿಲ್ದಾಣದಿಂದ ಹೊರಟಿದೆ.
ಪೋಪ್ ಅವರು ಸುಮಾರು ಹನ್ನೆರಡು ದಿನಗಳ ಕಾಲ ಈ ದೇಶಗಳ ಪ್ರವಾಸವನ್ನು ಕೈಗೊಂಡಿದ್ದು, ಪೇತ್ರರ ಉತ್ತರಾಧಿಕಾರಿಯಾಗಿ ಇದು ಅವರು ಕೈಗೊಳ್ಳುತ್ತಿರುವ ಅತ್ಯಂತ ಸುದೀರ್ಘ ಪ್ರೇಷಿತ ಪ್ರಯಾಣವಾಗಿದೆ.
ವ್ಯಾಟಿಕನ್ ನಗರದಿಂದ ವಿಮಾನ ನಿಲ್ದಾಣಕ್ಕೆ ಪೋಪ್ ಫ್ರಾನ್ಸಿಸ್ ಅವರು ಕಾರಿನ ಮೂಲಕ ತೆರಳಿದರು. ಮೊದಲು ಅವರು ಇಂಡೋನೇಷಿಯಾ ದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ರಾಜಧಾನಿ ಜಕಾರ್ತಾವನ್ನು ತಲುಪಲಿದ್ದಾರೆ.
02 September 2024, 19:03