ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಸೈತಾನನ ಕುತಂತ್ರದಿಂದ ಯೇಸು ನಮ್ಮನ್ನು ರಕ್ಷಿಸುತ್ತಾರೆ.

ಪೋಪ್ ಫ್ರಾನ್ಸಿಸ್ ಅವರು ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪವಿತ್ರಾತ್ಮರ ಕುರಿತು ಧರ್ಮೋಪದೇಶ ಸರಣಿಯನ್ನು ಮುಂದುವರೆಸಿದ್ದು, ಸೈತಾನನು ನಮ್ಮನ್ನು ಸದಾ ವಿಚಲಿತಗೊಳಿಸಲು ಹಾಗೂ ಗೊಂದಲಗೊಳಿಸಲು ಪ್ರಯತ್ನಿಸುತ್ತಿರುತ್ತಾನೆ ಎಂದು ಹೇಳಿದ್ದಾರೆ ಮಾತ್ರವಲ್ಲದೆ ಅವನ ಪ್ರಯತ್ನಗಳನ್ನು ಪ್ರಭು ಯೇಸು ಕ್ರಿಸ್ತರು ವಿಫಲಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪವಿತ್ರಾತ್ಮರ ಕುರಿತು ಧರ್ಮೋಪದೇಶ ಸರಣಿಯನ್ನು ಮುಂದುವರೆಸಿದ್ದು, ಸೈತಾನನು ನಮ್ಮನ್ನು ಸದಾ ವಿಚಲಿತಗೊಳಿಸಲು ಹಾಗೂ ಗೊಂದಲಗೊಳಿಸಲು ಪ್ರಯತ್ನಿಸುತ್ತಿರುತ್ತಾನೆ ಎಂದು ಹೇಳಿದ್ದಾರೆ ಮಾತ್ರವಲ್ಲದೆ ಅವನ ಪ್ರಯತ್ನಗಳನ್ನು ಪ್ರಭು ಯೇಸು ಕ್ರಿಸ್ತರು ವಿಫಲಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ಸೈತಾನನ ಬಳಿ ಎಂದಿಗೂ ಮಾತನಾಡಬೇಡಿ.

ಪೋಪ್ ಫ್ರಾನ್ಸಿಸ್ ಅವರು ಸೈತಾನನೊಂದಿಗೆ ಮಾತುಕತೆ ನಡೆಸುವುದರ ಗಂಭೀರ ಪರಿಣಾಮಗಳ ಕುರಿತು ಎಚ್ಚರಿಕೆಯನ್ನು ನೀಡಿದರು. ಸೈತಾನ ಕಟ್ಟಿ ಹಾಕಿದ ನಾಯಿಯಂತೆ. ಆತ ತನ್ನ ಸರಪಳಿಯನ್ನು ಬಿಚ್ಚಿಕೊಂಡು ಬಂದು ಯಾರಿಗೂ ಹಾನಿ ಮಾಡುವುದಿಲ್ಲ. ಬದಲಿಗೆ ಅಪಾಯವನ್ನು ಲೆಕ್ಕಿಸದೆ ಅದರ ಹತ್ತಿರ ಹೋಗುವವರಿಗೆ ಮಾತ್ರ ಸೈತಾನ ಕಚ್ಚುತ್ತಾನೆ ಎಂದು ಹೇಳುವ ಮೂಲಕ ಅವನ ಬಳಿ ಯಾವುದೇ ರೀತಿಯ ಮಾತುಕತೆ ಅಥವಾ ಸಂವಹನವನ್ನು ನಡೆಸಬಾರದು ಎಂದು ಹೇಳಿದರು.

ಸಂತರುಗಳ ಮಾದರಿ

ಇನ್ನು ಸೈತಾನನ ವಿರುದ್ಧಧನಾವು ಹೇಗೆ ಜಾಗರೂಕರಾಗಿದ್ದು, ಹೋರಾಡಬೇಕು ಎಂಬ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಮಗೆ ಸೈತಾನ ಇದ್ದಾನೆ, ಈ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಸುಲಭವಾಗಿ ಅರ್ಥವಾಗುವುದಿಲ್ಲ. ಸಂತರುಗಳ ಬದುಕಿನಿಂದ, ಸೈತಾನನ ವಿರುದ್ಧ ಅವರು ಹೋರಾಡಿದ ರೀತಿಯಿಂದ ಸೈತಾನ ಇದ್ದಾನೆ ಎಂಬುದು ಮತ್ತಷ್ಟು ಖಚಿತವಾಗುತ್ತದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಇದೇ ವೇಳೆ ಅವರು ಸಂತರುಗಳ ಜೀವನ ನಮಗೆ ಮಾದರಿಯಾಗಬೇಕು ಎಂದರು.

27 September 2024, 03:54