ಪೋಪ್ ಫ್ರಾನ್ಸಿಸ್: ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡಿ, ಆಶ್ರಯ ನೀಡಲು ಸಿದ್ಧ

ಜೆಸುಯಿಟ್ ಮಾಸ ಪತ್ರಿಕೆಯಾದ "ಲ ಸಿವಿಲ್ಟ ಕಟೋಲಿಕ"ವು ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಟಿಮೋರ್ ಲೆಸ್ಟೆ ಹಾಗೂ ಸಿಂಗಪೋರ್ ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಸುಯಿಟರೊಂದಿಗಿನ ಅವರ ಸಂವಾದದ ಕುರಿತು ವರದಿ ಮಾಡಿದ್ದು, ಈ ವೇಳೆ ಅವರು ಬರ್ಮಾದ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಅವರ ಕುರಿತು ಮಾತನಾಡಿದ್ದಾರೆ ಎಂಬುದನ್ನು ತಿಳಿಸಿದೆ.

ವರದಿ: ಸಾಲ್ವತೋರೆ ಸೆರ್ನೂಝಿಯೋ, ಅಜಯ್ ಕುಮಾರ್

ಜೆಸುಯಿಟ್ ಮಾಸ ಪತ್ರಿಕೆಯಾದ "ಲ ಸಿವಿಲ್ಟ ಕಟೋಲಿಕ"ವು ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಟಿಮೋರ್ ಲೆಸ್ಟೆ ಹಾಗೂ ಸಿಂಗಪೋರ್ ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಸುಯಿಟರೊಂದಿಗಿನ ಅವರ ಸಂವಾದದ ಕುರಿತು ವರದಿ ಮಾಡಿದ್ದು, ಈ ವೇಳೆ ಅವರು ಬರ್ಮಾದ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಅವರ ಕುರಿತು ಮಾತನಾಡಿದ್ದಾರೆ ಎಂಬುದನ್ನು ತಿಳಿಸಿದೆ. 

ಪೋಪ್ ಫ್ರಾನ್ಸಿಸ್ ಅವರು ಜೆಸುಯಿಟ್ ಸಭೆಯ ಗುರುಗಳೊಂದಿಗೆ ಮಾತುಕತೆಯನ್ನು ನಡೆಸುವ ವೇಳೆ "ವಿಯೇಟ್ನಾಂ ದೇಶದ ಮಾಜಿ ಅಧ್ಯಕ್ಷೆ, ಮಾನವತಾವಾದಿ, ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪ್ರಸ್ತುತ ಇಲ್ಲಿನ ಮಿಲಿಟರಿ ಗೃಹ ಬಂಧನದಲ್ಲಿರುವ ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡಿದರೆ, ಅವರಿಗೆ ಆಶ್ರಯ ನೀಡಲು ವ್ಯಾಟಿಕನ್ ಸಿದ್ಧವಿದೆ ಎಂದು ಹೇಳಿದ್ದಾರೆ ಎಂಬುದು ವರದಿಯಾಗಿದೆ.

ಪ್ರಸ್ತುತ ಮ್ಯಾನ್ಮಾರ್ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಪೋಪ್ ಫ್ರಾನ್ಸಿಸ್ ಅವರು, "ಹೌದು. ಪರಿಸ್ಥಿತಿ ಬಹಳ ಕಷ್ಟಕರವಾಗಿದೆ. ಆದರೂ ಸಹ ನಾವು ಎದೆಗುಂದಬಾರದು. ದೇವರಲ್ಲಿನ ನಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಅವರನ್ನು ಎಂದಿಗೂ ನಾವು ಎಡೆಬಿಡದೆ ಪ್ರಾರ್ಥಿಸಬೇಕು" ಎಂದು ಹೇಳಿದ್ದಾರೆ ಎಂದು ಈ ಮಾಸ ಪತ್ರಿಕೆಯು ವರದಿ ಮಾಡಿದೆ. 

24 September 2024, 16:25