ನವೀಕರಣ, ಸಹಭಾಗಿತ್ವ ಮತ್ತು ಸೇವೆಯನ್ನು ಅಪ್ಪಿಕೊಳ್ಳಿ: ಥಿಯೆಟೈನ್ ಗುರುಗಳಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು

ಥಿಯೇಟಿಯನ್ ಸಭೆಯ ಗುರುಗಳು ಅವರ ಸ್ಥಾಪಕ ಸಂತರಾದ ಕೆಜೆಟನ್ ಹಾಗೂ ಅವರ ಸಂಗಡಿಗರ ಧಾರ್ಮಿಕ ಪಟ್ಟದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ನವೀಕರಣ, ಸಹಭಾಗಿತ್ವ ಮತ್ತು ಸೇವೆಯನ್ನು ಅಪ್ಪಿಕೊಳ್ಳಿ ಎಂಬ ಕಿವಿಮಾತನ್ನು ಅವರಿಗೆ ಹೇಳಿದ್ದಾರೆ.

ವರದಿ: ಕ್ರಿಸ್ಟೊಫರ್ ವೆಲ್ಸ್, ಅಜಯ್ ಕುಮಾರ್

ಥಿಯೇಟಿಯನ್ ಸಭೆಯ ಗುರುಗಳು ಅವರ ಸ್ಥಾಪಕ ಸಂತರಾದ ಕೆಜೆಟನ್ ಹಾಗೂ ಅವರ ಸಂಗಡಿಗರ ಧಾರ್ಮಿಕ ಪಟ್ಟದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ನವೀಕರಣ, ಸಹಭಾಗಿತ್ವ ಮತ್ತು ಸೇವೆಯನ್ನು ಅಪ್ಪಿಕೊಳ್ಳಿ ಎಂಬ ಕಿವಿಮಾತನ್ನು ಅವರಿಗೆ ಹೇಳಿದ್ದಾರೆ.

"ಸಂತ ಕೆಜೆಟನ್ ಹಾಗೂ ಅವರ ಸಂಗಡಿಗರು ಸುಮಾರು 500 ವರ್ಷಗಳ ಹಿಂದೆ ಸಂತ ಪೇತ್ರರ ಮಹಾದೇವಾಲಯದಲ್ಲಿ ತಮ್ಮ ಧಾರ್ಮಿಕ ಬದುಕಿನ ಮೊದಲ ಪಟ್ಟವನ್ನು ಪಡೆದುಕೊಂಡರು. ಆಗ ಸಂತ ಪೇತ್ರರ ಮಹಾದೇವಾಲಯವು ಇನ್ನೂ ಅರಂಭದ ಸ್ಥಿತಿಯಲ್ಲಿತ್ತು. ಈಗಿನಂತೆ ಅದು ಇನ್ನೂ ಮಹಾದೇವಾಲಯವಾಗಿರಲಿಲ್ಲ." ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಮ್ಮ ಧಾರ್ಮಿಕ ಬದುಕಿನಲ್ಲಿ ನಾವು ಪರಿಪೂರ್ಣತೆಯಡೆಗೆ ಸಾಗಬೇಕೆಂದರೆ ನಮ್ಮ ಬದುಕಿನಲ್ಲಿ ನವೀಕರಣವನ್ನು, ಸಹಭಾಗಿತ್ವವನ್ನು ಹಾಗೂ ಸೇವೆಯನ್ನು ಯಾವುದೇ ಭಯ ಹಾಗೂ ಹಿಂಜರಿಕೆಗಳಿಲ್ಲದೆ ಅಪ್ಪಿಕೊಳ್ಳಬೇಕು" ಎಂದು ಹೇಳಿದರು.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಮಹಾದೇವಾಲಯದ ಇತಿಹಾಸದ ಕುರಿತು ಮಾತನಾಡಿ, ಹಲವು ಉದಾಹರಣೆಗಳನ್ನು ಹೇಳಿದರು.   

14 September 2024, 17:02