ಏಷ್ಯಾದ ಪ್ರವಾಹ ಸಂತ್ರಸ್ಥರಿಗೆ ಮರುಗಿದ ಪೋಪ್; ಶಾಂತಿ ಸ್ಥಾಪನೆಗೆ ಮನವಿ

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ವ್ಯಕ್ತಪಡಿಸಿದ ಚಿಂತನೆಯಲ್ಲಿ ಮ್ಯಾನ್ಮಾರ್ ಹಾಗೂ ವಿಯೇಟ್ನಾಂ ದೇಶಗಳಲ್ಲಿ ಯಾಗಿ ಬಿರುಗಾಳಿಯಿಂದ ಉಂಟಾಗಿರುವ ಪ್ರವಾಹದ ಕುರಿತು ಮಾತನಾಡಿ, ಈ ಪ್ರವಾಹದ ಸಂತ್ರಸ್ಥರಿಗಾಗಿ ಪ್ರಾರ್ಥಿಸಿದರು ಮಾತ್ರವಲ್ಲದೆ, ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿದರು.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ವ್ಯಕ್ತಪಡಿಸಿದ ಚಿಂತನೆಯಲ್ಲಿ ಮ್ಯಾನ್ಮಾರ್ ಹಾಗೂ ವಿಯೇಟ್ನಾಂ ದೇಶಗಳಲ್ಲಿ ಯಾಗಿ ಬಿರುಗಾಳಿಯಿಂದ ಉಂಟಾಗಿರುವ ಪ್ರವಾಹದ ಕುರಿತು ಮಾತನಾಡಿ, ಈ ಪ್ರವಾಹದ ಸಂತ್ರಸ್ಥರಿಗಾಗಿ ಪ್ರಾರ್ಥಿಸಿದರು ಮಾತ್ರವಲ್ಲದೆ, ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿದರು.

ಈವರೆಗೂ ವಿಯೇಟ್ನಾಂ ದೇಶದಲ್ಲಿ ಸುಮಾರು 200 ಜನರು ಮೃತ ಹೊಂದಿದ್ದು, 128 ಜನರು ಕಾಣೆಯಾಗಿದ್ದಾರೆ. ಕಳೆದ ಶುಕ್ರವಾರದಿಂದೀಚೆಗೆ 74 ಜನರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಈ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಮೃತ ಹೊಂದಿರುವವರು, ನಿರಾಶ್ರಿತರಾಗಿರುವವರು ಹಾಗೂ ಕಾಣೆಯಾಗಿರುವವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ದೇವರು ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಸಂಕಷ್ಟದಲ್ಲಿರುವವರು ಚೇತರಿಸಿಕೊಳ್ಳಲು ಚೈತನ್ಯವನ್ನು ನೀಡಲಿ." ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ಅವರು ವಿಶ್ವದಾದ್ಯಂತ ನಡೆಯುತ್ತಿರುವ ವಿವಿಧ ಯುದ್ಧಗಳ ಕುರಿತು ಮಾತನಾಡಿ "ಯುದ್ಧ ಎಂದಿಗೂ ಎಲ್ಲರ ಸೋಲಾಗಿದೆ. ಯುದ್ಧದ ಕಾರಣ ಮುಗ್ಧ ಜನರು, ವಿಶೇಷವಾಗಿ ಮಕ್ಕಳು ಅತೀವ ಹಿಂಸೆ, ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಆದುದರಿಂದ ಯುದ್ಧಗಳು ಕೊನೆಗೊಳ್ಳಲಿ, ಶಾಂತಿ ಎಲ್ಲೆಡೆ ನೆಲೆಸಲಿ ಎಂದು ನಾವು ಪ್ರಾರ್ಥಿಸೋಣ" ಎಂದು ಹೇಳುವುದರ ಮೂಲಕ ಶಾಂತಿ ಸ್ಥಾಪನೆಯ ಕುರಿತ ತಮ್ಮ ಮನವಿಯನ್ನು ಮತ್ತೊಮ್ಮೆ ಪುನರಾವರ್ತಿಸಿದ್ದಾರೆ.  

16 September 2024, 15:33