ಹೊಂಡುರಾಸ್ ದೇಶದ ಪರಿಸರ ಕಾರ್ಯಕರ್ತನ ಹತ್ಯೆಗೆ ಮರುಗಿದ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ ಅವರು ಹೊಂಡುರಾಸ್ ದೇಶದ ಪರಿಸರ ಕಾರ್ಯಕರ್ತ ಹುವಾನ್ ಅಂತೋನಿಯೋ ಲೊಪೆಝ್ ಅವರ ಹತ್ಯೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಇವರು ಹೊಂಡುರಾಸ್'ನ ಇಕೋಲಾಜಿ ಪಾಸ್ಟರಲ್ ಕೇರ್ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದಾರೆ.
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಹೊಂಡುರಾಸ್ ದೇಶದ ಪರಿಸರ ಕಾರ್ಯಕರ್ತ ಹುವಾನ್ ಅಂತೋನಿಯೋ ಲೊಪೆಝ್ ಅವರ ಹತ್ಯೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಇವರು ಹೊಂಡುರಾಸ್'ನ ಇಕೋಲಾಜಿ ಪಾಸ್ಟರಲ್ ಕೇರ್ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದಾರೆ.
ದೇವರ ವಾಕ್ಯದ ಪ್ರತಿನಿಧಿ, ಟ್ರುಜಿಲ್ಲೊ ಧರ್ಮಕ್ಷೇತ್ರದ ಸಾಮಾಜಿಕ ಪಾಲನಾ ಸಂಘಟನೆಯ ಸಂಯೋಜಕ ಮತ್ತು ಹೊಂಡುರಾಸ್‌ನ ಇಂಟಿಗ್ರಲ್ ಇಕಾಲಜಿ ಪ್ಯಾಸ್ಟೋರಲ್ ಕೇರ್‌ನ ಸ್ಥಾಪಕ ಸದಸ್ಯ ಹುವಾನ್ ಆಂಟೋನಿಯೊ ಲೋಪೆಜ್ ಕೊಲ್ಲಲ್ಪಟ್ಟರು ಎಂದು ತಿಳಿದು ನಾನು ದುಃಖಿತನಾಗಿದ್ದೇನೆ." ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಭಾನುವಾರ ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಪೋಪ್ ಅವರು "ಅವರ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ" ಹಾಗೂ ಎಲ್ಲಾ ರೀತಿಯ ಹಿಂಸೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
22 September 2024, 17:18