ಇಂಡೋನೇಶಿಯಾದ ಯಾಜಕರಿಗೆ “ಪುನರುತ್ಥಾನದ ಸಾಕ್ಷಿಗಳಾಗಲು” ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಜಕಾರ್ತಾದ ಸ್ವರ್ಗಸ್ವೀಕೃತ ಮಾತೆಯ ಪ್ರಧಾನಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ಇಂಡೋನೇಶಿಯಾದ ಧರ್ಮಾಧ್ಯಕ್ಷರುಗಳು, ಗುರುಗಳು, ಸೇವಾದರ್ಶಿಗಳು, ಧಾರ್ಮಿಕ ಸಹೋದರ-ಸಹೋದರಿಯರು, ಗುರುಮಠದ ವಿದ್ಯಾರ್ಥಿಗಳು ಹಾಗೂ ಧರ್ಮೋಪದೇಶಕರುಗಳನ್ನು ಭೇಟಿ ಮಾಡಿ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ಭೇಟಿಯಲ್ಲಿ ಒಬ್ಬ ಗುರು, ಒಬ್ಬ ಧಾರ್ಮಿಕ ಸಹೋದರಿ ಹಾಗೂ ಒಬ್ಬ ಧರ್ಮೋಪದೇಶಕನ ಸ್ವ-ಅನುಭವವನ್ನು ಕೇಳಿಸಿಕೊಂಡ ನಂತರ ಪೋಪ್ ಫ್ರಾನ್ಸಿಸ್ ಅವರು ಅವರ ಪ್ರೇಷಿತ ಪ್ರಯಾಣದ ಶೀರ್ಷಿಕೆಯ ಅಂಶಗಳಾಗಿರುವ “ವಿಶ್ವಾಸ, ಸೋದರತೆ ಹಾಗೂ ಕರುಣೆ”ಯ ಕುರಿತು ಮಾತನಾಡಿದ್ದಾರೆ.
“ಒಂದು ಧರ್ಮಸಭೆಯಾಗಿ ಹಾಗೂ ದೈವಜನರಾಗಿ ಮುನ್ನಡೆಯಲು ಈ ಮೂರು ಅಂಶಗಳು ನಮಗೆ ಸಹಕಾರಿಯಾಗಿವೆ. ಏಕೆಂದರೆ ಕ್ರಿಸ್ತರ ಧರ್ಮಸಭೆಯ ಸಾರವು ಇದೇ ಆಗಿದೆ” ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. “ಇದೇ ಹಿನ್ನೆಲೆಯಲ್ಲಿ ನಾವೆಲ್ಲರೂ ಶಾಂತಿಯಿಂದ ಹಾಗೂ ಐಕ್ಯತೆಯಿಂದ ಬದುಕಲು ಕರೆಯನ್ನು ಹೊಂದಿದ್ದೇವೆ” ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು “ಇಲ್ಲಿ ನೆರೆದಿರುವ ಪ್ರತಿಯೊಬ್ಬರು ಪುನರುತ್ಥಾನದ ಸಾಕ್ಷಿಗಳಾಗಿ ಬದುಕುವ ಮೂಲಕ ನೈಜ ಕ್ರೈಸ್ತರಾಗಬೇಕು” ಎಂದು ಎಲ್ಲರಿಗೂ ಕರೆ ನೀಡಿದರು.