ಇಂಡೋನೇಶಿಯಾದ ಅಧಿಕಾರಿಗಳಿಗೆ ಪೋಪ್: ಅಂತರ್-ಧರ್ಮೀಯ ಸಂವಾದ ಪರಸ್ಪರ ಗೌರವವನ್ನು ತರುತ್ತದೆ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಬುಧವಾರ ಪೋಪ್ ಫ್ರಾನ್ಸಿಸ್ ಅವರು ಇಂಡೋನೇಶಿಯಾ ನೆಲದಲ್ಲಿ ತಮ್ಮ ಮೊಟ್ಟ ಮೊದಲ ಭಾಷಣವನ್ನು ನೆರವೇರಿಸಿದರು. ಈ ವೇಳೆ ಅವರು ಆ ದೇಶದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ವಿದೇಶಾಂಗ ರಾಯಭಾರಿಗಳನ್ನು ಭೇಟಿ ಮಾಡಿದ್ದಾರೆ. ಜಕಾರ್ತಾದಲ್ಲಿರುವ ಅಧ್ಯಕ್ಷರ ನಿವಾಸದಲ್ಲಿ ಪೋಪ್ ಫ್ರಾನ್ಸಿಸ್ ಇವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇಂಡೋನೇಶಿಯಾದ ಅಧ್ಯಕ್ಷ ಜೋಕೋ ವುಡುಡೋ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಿದರು. ಈ ವೇಳೆ ಇಂಡೋನೇಶಿಯಾದ ಮಕ್ಕಳ ಗುಂಪೊಂದು ಇತರೆ ಅಧಿಕಾರಿಗಳು ಹಾಗೂ ಅಧ್ಯಕ್ಷರ ಭದ್ರತಾ ಸಿಬ್ಬಂಧಿ ಜೊತೆಗೆ ವ್ಯಾಟಿಕನ್ ಹಾಗೂ ಇಂಡೋನೇಶಿಯಾದ ಬಾವುಟಗಳನ್ನು ಬೀಸಿದರು.
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಶಿಯಾ ಅಧ್ಯಕ್ಚರ ಸಮ್ಮುಖದಲ್ಲಿ ‘ಬುಕ್ ಆಫ್ ಆನರ್’ ಗೆ ಸಹಿ ಮಾಡಿದರು.
ನೆರೆದಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು “ನಿಮ್ಮ ದೇಶದ ಧ್ಯೇಯವಾಕ್ಯ ‘ವಿವಿಧತೆಯಲ್ಲಿ ಏಕತೆ’ ಎಂಬುದು ನಿಜವಾಗಿಯೂ ನಿಮ್ಮ ಅಂತರಾಳಧ ಭಾವೈಕ್ಯತೆಯ ಪ್ರತೀಕವಾಗಿದೆ” ಎಂದು ಹೇಳಿದರು. “ಇಂಡೋನೇಶಿಯಾ ಹಲವು ಧರ್ಮಗಳು ಸಾಮರಸ್ಯದಿಂದ ಬದುಕುತ್ತಿರುವ ದೇಶವಾಗಿದ್ದು, ಈ ಭಾಂದವ್ಯ ಸದಾ ಪ್ರೀತಿ ಹಾಗೂ ವಿಶ್ವಾಸದಿಂದ ಮುಂದುವರೆಯಲಿ” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.