ಇಂಡೋನೇಷ್ಯಾ ಜನತೆಗೆ ಪೋಪ್ ಫ್ರಾನ್ಸಿಸ್: ನಿಮ್ಮ ಅತ್ಯದ್ಭುತ ಸ್ವಾಗತಕ್ಕೆ ಹಾಗೂ ಆತಿಥ್ಯಕ್ಕೆ ಧನ್ಯವಾದಗಳು

ಗುರುವಾರ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಇಂಡೋನೇಷಿಯಾ ಭೇಟಿಯನ್ನು ಅಲ್ಲಿದ ಜನತೆಗೆ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಕೊನೆಗೊಳಿಸಿದರು. ಈ ಸಂದರ್ಭದಲ್ಲಿ ಆ ದೇಶದ ಜನತೆಗಾಗಿ ಹಾಗೂ ಅವರ ಹೃದಯಪೂರ್ವಕ ಸ್ವಾಗತ ಮತ್ತು ಆಥಿತ್ಯಕ್ಕಾಗಿ ಧನ್ಯವಾದಗಳು ತಿಳಿಸಿದರು.

ವರದಿ: ಡಿಬೋರಾ ಕ್ಯಾಸ್ಟಲಿನೊ ಲೂಬೋವ್, ಅಜಯ್ ಕುಮಾರ್

ಗುರುವಾರ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಇಂಡೋನೇಷಿಯಾ ಭೇಟಿಯನ್ನು ಅಲ್ಲಿದ ಜನತೆಗೆ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಕೊನೆಗೊಳಿಸಿದರು. ಈ ಸಂದರ್ಭದಲ್ಲಿ ಆ ದೇಶದ ಜನತೆಗಾಗಿ ಹಾಗೂ ಅವರ ಹೃದಯಪೂರ್ವಕ ಸ್ವಾಗತ ಮತ್ತು ಆಥಿತ್ಯಕ್ಕಾಗಿ ಧನ್ಯವಾದಗಳು ತಿಳಿಸಿದರು.

ತಮ್ಮ ಭೇಟಿಯ ಅಂತಿಮ ಘಟ್ಟದಲ್ಲಿ ಇಂಡೋನೇಷ್ಯಾದ ಕ್ರೈಸ್ತ ಜನತೆಗಾಗಿ ವಿಶ್ವಗುರು ಫ್ರಾನ್ಸಿಸ್ ಅವರು ಬಲಿ ಪೂಜೆಯನ್ನು ಅರ್ಪಿಸಿದ್ದಾರೆ. ಈ ದೇಶದಲ್ಲಿ ಕ್ರೈಸ್ತರು ಸುಮಾರು ಮೂರು ಪರ್ಸೆಂಟ್ ಇದ್ದು, ಒಟ್ಟಾರೆ ಕ್ರೈಸ್ತರ ಸಂಖ್ಯೆಯಲ್ಲಿ 80 ಲಕ್ಷ ವಿಧ ಎಂದು ಅಂದಾಜಿಸಲಾಗಿದೆ.

ಬಲಿ ಪೂಜೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ಕರು, ಜಕಾರ್ತಾ ದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಇಗ್ನೇಶಿಯಸ್ ಸುಹರ್ತೋ ಅವರಿಗೆ ಹಾಗೂ ಆದೇಶದ ಧರ್ಮಧ್ಯಕ್ಷ ಮಂಡಳಿಯ ಅಧ್ಯಕ್ಷರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲಿನ ಗುರುಗಳಿಗೆ ಧಾರ್ಮಿಕ ಸಹೋದರ ಸಹೋದರಿಯರಿಗೆ ಸಹ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಹೃದಯಾಂತರಾಳದ ಧನ್ಯವಾದಗಳು ತಿಳಿಸಿದ್ದಾರೆ.

ಅಂತಿಮವಾಗಿ, ಪ್ರಿಯ ಸಹೋದರ ಸಹೋದರಿಯರೇ, "ನೀವು ವಿಶ್ವಾಸದಲ್ಲಿ ಹಾಗೂ ಸೋದರತೆಯಲ್ಲಿ ಬೆಳೆಯಲು ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಹೇಳಿದ್ದಾರೆ.

05 September 2024, 18:41