ಪೋಪ್ ಫ್ರಾನ್ಸಿಸ್: ಬದುಕಿನ ಒಲಂಪಿಕ್ ಆಟದಲ್ಲಿ ನೀವೆಲ್ಲರೂ ಪ್ರೀತಿಯ ಆಟಗಾರರಾಗಿದ್ದೀರಿ
ವರದಿ: ಫ್ರಾನ್ಸಿಸ್ಕ ಮೆರ್ಲೋ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ ದೇಶಕ್ಕೆ ತಮ್ಮ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದಾರೆ. ತಮ್ಮ ಎರಡನೆಯ ದಿನದ ಪ್ರಯಾಣದಲ್ಲಿ ಇಂಡೋನೇಷಿಯಾದ ಕಥೋಲಿಕ ಧರ್ಮಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು, ಬದುಕಿನ ಒಲಂಪಿಕ್ ಆಟದಲ್ಲಿ ನೀವೆಲ್ಲರೂ ಪ್ರೀತಿಯ ಆಟಗಾರರಾಗಿದ್ದೀರಿ ಎಂದು ಹೇಳಿದ್ದಾರೆ.
ಇದೆ ವೇಳೆ ಅವರು ಇಂಡೋನೇಷಿಯಾದ ಹಲವು ದತ್ತಿ ಸಂಸ್ಥೆಗಳನ್ನು ಉದ್ದೇಶಿಸಿ ಸಹ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಶ್ರೀಸಾಮಾನ್ಯರು ತಮ್ಮ ವಿಶ್ವಾಸದ ಕಥೆಗಳನ್ನು ವಿಶ್ವಗುರು ಫ್ರಾನ್ಸಿಸ್ ಅವರ ಬಳಿ ಹಂಚಿಕೊಂಡರು.
ಅವರ ಕಥೆಗಳನ್ನು ಆಲಿಸಿ ವಿಶ್ವಗುರು ಕ್ರಾಂತಿಸಬರುವವರಿಗೆ ಧನ್ಯವಾದಗಳು ತಿಳಿಸಿದರು. ಎರಡು ಕಥೆಗಳಲ್ಲಿ ಬದುಕಿನ ಅರ್ಥವನ್ನು ಹಾಗೂ ದೇವರ ಚಿತ್ತವನ್ನು ಅರಿತುಕೊಳ್ಳುವ ಅಂಶಗಳು ಹಾಗೂ ವಿಧಾನಗಳಿವೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕಾಗಿದೆ ಎಂದು ವಿಶ್ವ ಗುರು ಪ್ರಾನ್ಸಿಸ್ ಅವರು ಈ ಸಂದರ್ಭದಲ್ಲಿ ಹೇಳಿದರು.
ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಇಂಡೋನೇಷಿಯಾ ದೇಶಕ್ಕೆ ತಮ್ಮ ಭೇಟಿ ಸಾಧ್ಯವಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.