ಹುಡುಕಿ

ಇಂಡೋನೇಷ್ಯಾದ ಮಸೀದಿಯಲ್ಲಿ ಪೋಪ್: ದೇವರೆಡೆಗೆ ಯಾತ್ರಿಕರಾಗಿರುವ ನಾವು ನಮ್ಮ ಪಯಣದಲ್ಲಿ ಗೆಳೆತನವನ್ನು ಬೆಳೆಸಿಕೊಳ್ಳಬೇಕು

ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ ಪ್ರವಾಸದಲ್ಲಿದ್ದಾರೆ. ಇಲ್ಲಿ ತಮ್ಮ ಪ್ರವಾಸದ ಕೊನೆಯ ದಿನದಂದು ಅಂತರ್ಧರ್ಮೀಯ ಸಂವಾದದಲ್ಲಿ ಭಾಗವಹಿಸುವ ಮೂಲಕ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ನಡುವಿನ ಬೆಸುಗೆಯಾಗಿ ವರ್ತಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ ಪ್ರವಾಸದಲ್ಲಿದ್ದಾರೆ. ಇಲ್ಲಿ ತಮ್ಮ ಪ್ರವಾಸದ ಕೊನೆಯ ದಿನದಂದು ಅಂತರ್ಧರ್ಮೀಯ ಸಂವಾದದಲ್ಲಿ ಭಾಗವಹಿಸುವ ಮೂಲಕ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ನಡುವಿನ ಬೆಸುಗೆಯಾಗಿ ವರ್ತಿಸಿದ್ದಾರೆ.

ಜಕಾರ್ತಾದಲ್ಲಿರುವ ಇಸ್ತಿಕ್ ಲಾಲ್ ಮಸೀದಿಗೆ ಭೇಟಿ ನೀಡಿರುವ ಅವರು ಅಲ್ಲಿನ ಮುಖ್ಯ ಮೌಲ್ವಿ ಮಹಮ್ಮದ್ ನಾಸಿರುದ್ದೀನ್ ಅವರನ್ನು ಭೇಟಿ ಮಾಡಿದ್ದಾರೆ. ಇಸ್ಲಾಂ ಹಾಗೂ ಕ್ರೈಸ್ತ ಮತದ ಈ ಇಬ್ಬರು ಪ್ರಧಾನ ಗುರುಗಳು ಗೆಳೆತನ ಕಣಿವೆ ಎಂದು ಕರೆಯಲ್ಪಡುವ ಒಂದು ಸ್ಥಳಕ್ಕೆ ಭೇಟಿಯನ್ನು ನೀಡಿದ್ದಾರೆ.

ಈ ಇಬ್ಬರು ಧಾರ್ಮಿಕ ಗುರುಗಳು ಪರಸ್ಪರ ಗೌರವ ಹಾಗೂ ಸೌಹಾರ್ದತೆಯನ್ನು ಕಾಪಾಡುವ ದಾಖಲೆಗೆ ಸಹಿಯನ್ನು ಹಾಕಿದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಮಸೀದಿಯ ಪ್ರಧಾನ ಮೌಲ್ವಿ ಮಹಮ್ಮದ್ ನಾಜಿರುದ್ದೀನ್ ಅವರ ಆತಿತ್ಯಕ್ಕೆ ಧನ್ಯವಾದಗಳು ತಿಳಿಸಿದರು. ಪರಸ್ಪರ ಭಾವೈಕ್ಯತೆಯ ಕುರಿತು ಮಾತನಾಡಿದ ಅವರು ಈ ಜಗತ್ತಿನಲ್ಲಿ ಧರ್ಮಾತೀತವಾಗಿ ನಾವು ಬದುಕಬೇಕೆಂದರೆ ಮತ್ತೊಬ್ಬರನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮತ್ತೊಮ್ಮೆ ಅಂತರ್ಧರ್ಮೀಯ ಭಾವೈಕ್ಯತೆ ಹಾಗೂ ಸಾಮರಸ್ಯದ ಕುರಿತು ಮಾತನಾಡಿ ಅದಕ್ಕೆ ಎಲ್ಲರೂ ಸ್ಪಂದಿಸಬೇಕು ಎಂದು ತಿಳಿಸಿದರು.

05 September 2024, 18:46