ಪೋಪ್ ಫ್ರಾನ್ಸಿಸ್ ಅವರ ಭೇಟಿಯ ಕುರಿತು ಇಂಡೋನೇಷಿಯಾ ಕಥೋಲಿಕರ ಅಭಿಪ್ರಾಯ
ವರದಿ: ವ್ಯಾಟಿಕನ್ ನ್ಯೂಸ್
ಗುರುವಾರ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಇಂಡೋನೇಷಿಯಾ ಭೇಟಿಯನ್ನು ಅಲ್ಲಿದ ಜನತೆಗೆ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಕೊನೆಗೊಳಿಸಿದರು. ಈ ಸಂದರ್ಭದಲ್ಲಿ ಆ ದೇಶದ ಜನತೆಗಾಗಿ ಹಾಗೂ ಅವರ ಹೃದಯಪೂರ್ವಕ ಸ್ವಾಗತ ಮತ್ತು ಆಥಿತ್ಯಕ್ಕಾಗಿ ಧನ್ಯವಾದಗಳು ತಿಳಿಸಿದರು. ಪೋಪ್ ಫ್ರಾನ್ಸಿಸ್ ಅವರು ಭೇಟಿಯ ಕುರಿತು ಇಬ್ಬರು ಇಂಡೋನೇಷಿಯಾದ ಯುವ ಕಥೋಲಿಕರು ತಮ್ಮ ಅಭಿಪ್ರಾಯಗಳನ್ನು ವ್ಯಾಟಿಕನ್ ನ್ಯೂಸ್'ನೊಂದಿಗೆ ಹಂಚಿಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಈ ಬಲಿಪೂಜೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕ್ರೈಸ್ತರು ಭಾಗವಹಿಸಿದ್ದರು. ಈ ಬಲಿಪೂಜೆಯೂ ಜಕಾರ್ತಾದಲ್ಲಿರುವ ಜೆಲೋರಾ ಕಾಂಗ್ ಕಾರ್ನೋ ಸ್ಟೇಡಿಯಂನಲ್ಲಿ ನಡೆಯಿತು.
ಇನ್ನೇನು ಬಲಿಪೂಜೆ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ವ್ಯಾಟಿಕನ್ ನ್ಯೂಸ್ ಪ್ರತಿನಿಧಿ ಅಲ್ಲಿಗೆ ಆಗಮಿಸಿದ್ದ ಇಬ್ಬರು ಯುವ ಕಥೋಲಿಕರ ಬಳಿ ಪೋಪ್ ಫ್ರಾನ್ಸಿಸ್ ಅವರ ಇಂಡೋನೇಷಿಯಾ ಭೇಟಿ ಕುರಿತು ಪ್ರಶ್ನಿಸಿದಾಗ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಪ್ಪತ್ನಾಲ್ಕು ವರ್ಷದ ಯೂಜಿನ್ ಹಾಗೂ ಇಪ್ಪತ್ತು ವರ್ಷದ ನತಾಶಾ ಈ ಇಬ್ಬರು ಯುವ ಕಥೋಲಿಕರಾಗಿದ್ದಾರೆ.
ಯೂಜಿನ್ ಅವರ ಪ್ರಕಾರ "ಇಂಡೋನೇಷಿಯಾದಂತಹ ಒಂದೇ ಧರ್ಮ ಪ್ರಧಾನವಾಗಿರುವ ದೇಶದಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಭೇಟಿ, ಇಲ್ಲಿನ ಅಲ್ಪಸಂಖ್ಯಾತ ಕ್ರೈಸ್ತರಿಗೆ ಹೊಸ ಗಮನವನ್ನು ಹಾಗೂ ಪ್ರಚಾರವನ್ನು ನೀಡುತ್ತದೆ. ಇದು ಇವರು ಮುಖ್ಯಯವಾಹಿನಿಗೆ ಬರಲು ಸಹಾಯಕವಾಗಿದೆ."
ಇಟಲಿಯ ಕಥೋಲಿಕರಿಗೆ ನತಾಶ ಅವರ ಸಂದೇಶ ಏನೆಂದು ಪ್ರಶ್ನಿಸಿದಾಗ "ನಾನು ಅವರಿಗೆ ಹೇಳಲು ಬಯಸಿರುವುದೇನೆಂದರೆ ನಾವು ಇಲ್ಲಿದ್ದೇವೆ. ನಾವು ಇಂಡೋನೇಷಿಯನ್ನರಾದರೂ ಕಥೋಲಿಕರಾಗಿದ್ದೇವೆ. ನಮಗೆ ಇಷ್ಟವಾದುದದನ್ನು ನಾವು ಮಾಡುತ್ತೇವೆ ಮಾತ್ರವಲ್ಲದೆ ಅದರಲ್ಲಿ ಆನಂದವನ್ನು ಪಡುತ್ತೇವೆ" ಎಂದು ಹೇಳಿದರು.