ಹುಡುಕಿ

ಇಂಡೋನೇಷಿಯಾಕ್ಕೆ ವಿದಾಯ ಹೇಳಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ ದೇಶದ ತಮ್ಮ ಎರಡು ದಿನಗಳ ಐತಿಹಾಸಿಕ ಭೇಟಿಯನ್ನು ಮುಗಿಸಿ, ಇಂದು ಇಂಡೋನೇಷಿಯಾ ಜನತೆ ವಿದಾಯ ಹೇಳಿ ಪಪುವಾ ನ್ಯೂಗಿನಿ ದೇಶಕ್ಕೆ ಪ್ರಯಾಣಿಸಿದ್ದಾರೆ. ಇದು ಅವರ ನಲವತ್ತೈದನೇ ಪ್ರೇಷಿತ ಪ್ರಯಾಣವಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ ದೇಶದ ತಮ್ಮ ಎರಡು ದಿನಗಳ ಐತಿಹಾಸಿಕ ಭೇಟಿಯನ್ನು ಮುಗಿಸಿ, ಇಂದು ಇಂಡೋನೇಷಿಯಾ ಜನತೆ ವಿದಾಯ ಹೇಳಿ ಪಪುವಾ ನ್ಯೂಗಿನಿ ದೇಶಕ್ಕೆ ಪ್ರಯಾಣಿಸಿದ್ದಾರೆ. ಇದು ಅವರ ನಲವತ್ತೈದನೇ ಪ್ರೇಷಿತ ಪ್ರಯಾಣವಾಗಿದೆ. 

ಈ ಭೇಟಿಯ ಸಂಧರ್ಭದಲ್ಲಿ ಅವರು ಇಂಡೋನೇಷಿಯಾದ ಕಥೋಲಿಕ ಧರ್ಮಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಿ, ಬದುಕಿನ ಒಲಂಪಿಕ್ ಆಟದಲ್ಲಿ ನೀವೆಲ್ಲರೂ ಪ್ರೀತಿಯ ಆಟಗಾರರಾಗಿದ್ದೀರಿ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಇಂಡೋನೇಷಿಯಾದ ಹಲವು ದತ್ತಿ ಸಂಸ್ಥೆಗಳನ್ನು ಉದ್ದೇಶಿಸಿ ಸಹ ಮಾತನಾಡಿದ್ದಾರೆ. ತಮ್ಮ ಪ್ರೇಷಿತ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಂತರ್-ಧರ್ಮೀಯ ಸಂವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ, ಇಲ್ಲಿನ ಗ್ರಾಂಟ್ ಇಮಾಮ್ ನಾಸಿರುದ್ಧೀನ್ ಅವರನ್ನು ಭೇಟಿ ಮಾಡಿದ್ದಾರೆ. ಪರಸ್ಪರ ಪ್ರೀತಿ, ಭರವಸೆ, ನಂಬಿಕೆ ಹಾಗೂ ಸಾಮರಸ್ಯದ ಜೀವನದ ಕುರಿತು ಪೋಪ್ ಫ್ರಾನ್ಸಿಸ್ ಇಂಡೋನೇಷಿಯಾದ ಜನತೆಗೆ ಒತ್ತಿ ಹೇಳಿದ್ದಾರೆ. 

 

06 September 2024, 17:14