ಇಂಡೋನೇಷಿಯಾದ ಜಕಾರ್ತಾದಲ್ಲಿ ಅಂತರ್-ಧರ್ಮೀಯ ಸಂವಾದದಲ್ಲಿ ಭಾಗವಹಿಸಿದ ಪೋಪ್ ಫ್ರಾನ್ಸಿಸ್
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಜಕಾರ್ತಕ್ಕೆ ಆಗಮಿಸುವ ಮೂಲಕ ತಮ್ಮ 45ನೇ ವಿದೇಶ ಪ್ರಯಾಣವನ್ನು ಆಗಮಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಸುಮಾರು ಹದಿಮೂರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿದ ನಂತರ ಇಂಡೋನೇಷಿಯಾದ ಜಕಾರ್ತದಲ್ಲಿ ಬಂದಿಳಿದಿದ್ದಾರೆ. ಇದು ಅವರ 45ನೇ ವಿದೇಶ ಪ್ರಯಾಣವಾಗಿದ್ದು, ತಮ್ಮ ಪ್ರೇಷಿತಾಧಿಕಾರದ ಸುದೀರ್ಘ ವಿದೇಶ ಪ್ರಯಾಣವಾಗಿದೆ. ತಮ್ಮ ಈ ವಿದೇಶ ಪ್ರಯಾಣದಲ್ಲಿ ಸಿಂಗಪೋರ್, ತಿಮೋರ್ ಲೆಸ್ತೆ, ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇಂಡೋನೇಷಿಯಾ ಬಹುತೇಕ ಮುಸ್ಲಿಂ ಬಾಹುಳ್ಯವುಳ್ಳ ದೇಶವಾಗಿದ್ದು, ಇಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಂತರ್-ಧರ್ಮೀಯ ಸಂವಾದಲ್ಲಿ ಭಾಗವಹಿಸಿದ್ದಾರೆ. ಇಂದು ಅವರ ವಿದೇಶದ ಪ್ರಯಾಣದ ಹೃದಯಭಾಗವಾಗಿರುವ ಈ ಸಂವಾದದಲ್ಲಿ ಐಕ್ಯತೆ, ಸಮಗ್ರತೆಯ ಕುರಿತು ಮಾತನಾಡಿದರು. ಇಲ್ಲಿ ಧಾರ್ಮಿಕ ವೈವಿಧ್ಯತೆ ಹೇಗಿದೆ ಎಂದರೆ ಕ್ರೈಸ್ತರು ಹಾಗೂ ಮುಸ್ಲಿಂರ ನಡುವೆ ಮದುವೆಗಳು ಸಹಜವಾಗಿವೆ ಹಾಗೂ ಇವರ ಮಕ್ಕಳು ಗುರುಗಳಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಅಂತರ್-ಧರ್ಮೀಯ ಸಂವಾದದಲ್ಲಿ ಮುಖ್ಯ ಸಂಗತಿ ಎಂದರೆ ಶಾಂತಿ ಸ್ಥಾಪಿಸುವಲ್ಲಿ ಪೋಪ್ ಫ್ರಾನ್ಸಿಸ್ ಅವರು ಹಾಗೂ ಆ ಇಶ್ಕಲಾಲ್ ಮಸೀದಿಯ ನಡುವೆ ಒಪ್ಪಂದ. ಪೋಪ್ ಫ್ರಾನ್ಸಿಸ್ ಅವರ ಭೇಟಿಯ ಕೇಂದ್ರಬಿಂದು ಇದಾಗಿದೆ.