ಇಂಡೋನೇಷಿಯಾದ ಜಕಾರ್ತಾದಲ್ಲಿ ಬಂದಿಳಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಸುಮಾರು ಹದಿಮೂರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿದ ನಂತರ ಇಂಡೋನೇಷಿಯಾದ ಜಕಾರ್ತದಲ್ಲಿ ಬಂದಿಳಿದಿದ್ದಾರೆ. ಇದು ಅವರ 45ನೇ ವಿದೇಶ ಪ್ರಯಾಣವಾಗಿದ್ದು, ತಮ್ಮ ಪ್ರೇಷಿತಾಧಿಕಾರದ ಸುದೀರ್ಘ ವಿದೇಶ ಪ್ರಯಾಣವಾಗಿದೆ. ತಮ್ಮ ಈ ವಿದೇಶ ಪ್ರಯಾಣದಲ್ಲಿ ಸಿಂಗಪೋರ್, ತಿಮೋರ್ ಲೆಸ್ತೆ, ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸುಮಾರು ಹದಿಮೂರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿದ ನಂತರ ಇಂಡೋನೇಷಿಯಾದ ಜಕಾರ್ತದಲ್ಲಿ ಬಂದಿಳಿದಿದ್ದಾರೆ. ಇದು ಅವರ 45ನೇ ವಿದೇಶ ಪ್ರಯಾಣವಾಗಿದ್ದು, ತಮ್ಮ ಪ್ರೇಷಿತಾಧಿಕಾರದ ಸುದೀರ್ಘ ವಿದೇಶ ಪ್ರಯಾಣವಾಗಿದೆ. ತಮ್ಮ ಈ ವಿದೇಶ ಪ್ರಯಾಣದಲ್ಲಿ ಸಿಂಗಪೋರ್, ತಿಮೋರ್ ಲೆಸ್ತೆ, ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಜಕಾರ್ತಕ್ಕೆ ಆಗಮಿಸುವ ಮೂಲಕ ತಮ್ಮ 45ನೇ ವಿದೇಶ ಪ್ರಯಾಣವನ್ನು ಆಗಮಿಸಿದ್ದಾರೆ. ಪೋಪ್ ಅವರ ಜೊತೆಗೆ ವಿಮಾನದಲ್ಲಿ ಪತ್ರಕರ್ತರುಗಳೂ ಸಹ ಬಂದಿದ್ದಾರೆ. ಅವರೆಲ್ಲರನ್ನು ಕಂಡು ಪೋಪ್ ಫ್ರಾನ್ಸಿಸ್ ಮಾತನಾಡಿಸಿದರು.

ಜಕಾರ್ತದಲ್ಲಿ ಮೂರು ರಾತ್ರಿಗಳನ್ನು ಕಳೆಯಲಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸ್ಥಳೀಯ ಮಸೀದಿಗೆ ಭೇಟಿ ನೀಡುವ ಮೂಲಕ ಅಂತರ್-ಧರ್ಮೀಯ ಸಂವಾದದಲ್ಲಿ ಭಾಗವಹಿಸಲಿದ್ದಾರೆ. "ವಿಶ್ವಾಸ, ಭ್ರಾತೃತ್ವ ಹಾಗೂ ಕಾರುಣ್ಯ" ಎಂಬ ಘೋಷವಾಕ್ಯದಡಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದಾರೆ.

03 September 2024, 18:21