ಸಮಾಜದ ಸಕಲ ವರ್ಗಗಳ ವಿಶ್ವಗುರು ಫ್ರಾನ್ಸಿಸ್ ಅವರ ಪಪುವಾ ನ್ಯೂಗಿನಿ ಭೇಟಿ
ವರದಿ: ವ್ಯಾಟಿಕನ್ ನ್ಯೂಸ್
ಪಪುವಾ ನ್ಯೂಗಿನಿ ದೇಶಕ್ಕೆ ಮೂವತ್ತು ವರ್ಷಗಳ ಹಿಂದೆ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಆಗಮಿಸಿದ್ದರು. ಇದೀಗ ಪೋಪ್ ಫ್ರಾನ್ಸಿಸ್ ಅವರು ಈ ದೇಶಕ್ಕೆ ಭೇಟಿ ನೀಡಿದ್ದಾರೆ. ವಿಶ್ವದ ಅಸಂಪರ್ಕಿತ ಬುಡಕಟ್ಟುಗಳ ನಾಡಾಗಿರುವ ಈ ದೇಶಕ್ಕೆ ಪೋಪ್ ಫ್ರಾನ್ಸಿಸ್ ಅವರ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ತಮ್ಮ ಭೇಟಿಯ ವೇಳೆಯಲ್ಲಿ ಮೊಟ್ಟ ಮೊದಲನೇಯದಾಗಿ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸರ್ಕಾರದ ಮಂತ್ರಿಗಳೂ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿ ಮಾಡಿ, ಸಂವಾದಿಸಲಿದ್ದಾರೆ. ತದ ನಂತರ ಬೀದಿಯಲ್ಲಿ ಅನಾಥರಾಗಿರುವ ಮಕ್ಕಳೂ ಸೇರಿದಂತೆ ವಿಶೇಷ ಚೇತನ ಮಕ್ಕಳ ಗುಂಪುಗಳನ್ನು ಭೇಟಿ ಮಾಡಲಿದ್ದಾರೆ.
ಇಲ್ಲಿನ ಕ್ರೈಸ್ತರ ಸಹಾಯಮಾತೆ ಪ್ರಧಾನಾಲಯದಲ್ಲಿ ಪಪುವಾ ನ್ಯೂಗಿನಿ ಮತ್ತು ಸೋಲೊಮೊನ್ ದ್ವೀಪಗಳ ಕಥೋಲಿಕ ಧರ್ಮಾಧ್ಯಕ್ಷರು, ಗುರುಗಳು, ಸೇವಾದರ್ಶಿಗಳೂ ಸೇರಿದಂತೆ ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೊನೆಗೆ ಇಲ್ಲಿನ ಸರ್ ಜಾನ್ ಗೈಸ್ ಸ್ಟೇಡಿಯಂನಲ್ಲಿ ಭಕ್ತಾಧಿಗಳಿಗಾಗಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ವನಿಮೋ ಎಂಬ ಪ್ರಾಂತ್ಯಕ್ಕೆ ಅಂತಿಮವಾಗಿ ಪಯಣಿಸುವ ಪೋಪ್ ಫ್ರಾನ್ಸಿಸ್ ಅಲ್ಲಿನ ಜನತೆಯನ್ನು ಹಾಗೂ ಶುಭಸಂದೇಶಕ ಪ್ರಸಾರಕರನ್ನು ಭೇಟಿ ಮಾಡಿ ಹೊರಡಲಿದ್ದಾರೆ.