ಹುಡುಕಿ

ಪಪುವಾ ನ್ಯೂಗಿನಿ ಮಕ್ಕಳಿಗೆ ಪೋಪ್ ಫ್ರಾನ್ಸಿಸ್: ಪ್ರೀತಿಯ ಬೆಳಕನ್ನು ಉರಿಸುತ್ತಿರಿ

ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಬೀದಿ ಮಕ್ಕಳನ್ನು ಹಾಗೂ ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಸದಾ ದೇವರ ಪ್ರೀತಿಯ ಬೆಳಕನ್ನು ಉರಿಸುತ್ತಿರುವಂತೆ ಅವರಿಗೆ ಕರೆ ನೀಡಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಬೀದಿ ಮಕ್ಕಳನ್ನು ಹಾಗೂ ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಸದಾ ದೇವರ ಪ್ರೀತಿಯ ಬೆಳಕನ್ನು ಉರಿಸುತ್ತಿರುವಂತೆ ಅವರಿಗೆ ಕರೆ ನೀಡಿದ್ದಾರೆ.

ತಮ್ಮ ಪೋಪಾಧಿಕಾರದ ನಲವತ್ತೈದನೇಯ ಪ್ರೇಷಿತ ಭೇಟಿಯ ಹಿನ್ನೆಲೆ ಸರಣಿ ದೇಶಗಳಿಗೆ ಪೋಪ್ ಫ್ರಾನ್ಸಿಸ್ ಅವರು ಭೇಟಿ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಇಂಡೋನೇಷಿಯಾ ಭೇಟಿ ಮುಗಿದ ಬಳಿಕ ಇದೀಗ ಪಪುವಾ ನ್ಯೂಗಿನಿ ದೇಶಕ್ಕೆ ಆಗಮಿಸಿದ್ದಾರೆ.

ಯೇಸುವಿನ ಪವಿತ್ರ ಹೃದಯದ ಧಾರ್ಮಿಕ ಸಭೆಯ ಕನ್ಯಾಸ್ತ್ರೀಗಳು ಇಲ್ಲಿ ಬೀದಿ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳ ಸೇವೆಯನ್ನು ಮಾಡುತ್ತಿದ್ದಾರೆ. ಕಾಲನ್ ಸೇವೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಸೇವೆಯು ಇಡೀ ದೇಶದಲ್ಲೇ ಮಕ್ಕಳ ಕುರಿತ ದೊಡ್ಡ ಸೇವೆಯಾಗಿದೆ.

ಮಕ್ಕಳನ್ನು ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಾನ್ಯಾಕೆ ಇತರರ ಹಾಗೆ ಇಲ್ಲ? ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಅವರು ನಾವ್ಯಾರೂ ಸಹ ಇತರರ ಹಾಗೆ ಇರಲು ಸಾಧ್ಯವೇ ಇಲ್ಲ ಏಕೆಂದರೆ ನಾವೆಲ್ಲರೂ ದೇವರ ಅನನ್ಯ ಸೃಷ್ಟಿಗಳಾಗಿದ್ದೇವೆ ಎಂದು ಹೇಳಿದರು.

07 September 2024, 14:04