ಹುಡುಕಿ

ಪಪುವಾ ನ್ಯೂಗಿನಿಯಲ್ಲಿ ಪೋಪ್ ಫ್ರಾನ್ಸಿಸ್: ಪ್ರಾರ್ಥಿಸುವ ಜನತೆಗೆ ಉತ್ತಮ ಭವಿಷ್ಯವಿದೆ

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಆಗಮಿಸಿದ್ದು, ಇಲ್ಲಿ ಸರ್ಕಾರಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಆಗಮಿಸಿದ್ದು, ಇಲ್ಲಿ ಸರ್ಕಾರಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿಯ ವಿವಿಧತೆಯಲ್ಲಿನ ಏಕತೆಯನ್ನು ಶ್ಲಾಘಿಸಿದ್ದಾರೆ ಮಾತ್ರವಲ್ಲದೆ ಸದಾಕಾಲ ಸಾಮರಸ್ಯದಿಂದ ಹಾಗೂ ಸೋದರತೆಯಿಂದ ಬಾಳುವಂತೆ ಕರೆ ನೀಡಿದ್ದಾರೆ.

ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಸರ್ ಬಾಬ್ ಬೋಫೆಂಡ್ ಡಾಡೆ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಹೃದಯಾಂತರಾಳದ ಸ್ವಾಗತವನ್ನು ಕೋರಿದರು. ಈ ದೇಶದಲ್ಲಿ ಕಥೋಲಿಕ ಕ್ರೈಸ್ತ ಸಮುದಾಯದ ಇತಿಹಾಸ ಹಾಗೂ ಹೇಗೆ ಅದು ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದೆ ಎಂಬ ಕುರಿತು ಅವರು ನೆನಪಿಸಿದರು.

ಪೋಪ್ ಫ್ರಾನ್ಸಿಸ್ ಅವರು ಗವರ್ನರ್ ಜನರಲ್ ಅವರ ಸ್ವಾಗತಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ರೋಮ್ ನಗರದಿಂದ ನಾನು ಇಷ್ಟು ದೂರವಾಗಿದ್ದರೂ ಸಹ ನನಗೆ ಧರ್ಮಸಭೆಯ ಹೃದಯದಲ್ಲಿದ್ದೇನೆ ಎಂಬ ಭಾವನೆ ಇದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ದೇಶದ ಸ್ವಾಭಾವಿಕ ಸಂಪತ್ತು ಎಲ್ಲರದ್ದೂ ಆಗಿದ್ದು, ಅದನ್ನು ಬಹಳ ವಿವೇಚನೆಯಿಂದ ಹಾಗೂ ಜಾಗರೂಕತೆಯಿಂದ ಬಳಸಿಕೊಳ್ಳಬೇಕು ಎಂದು ಹೇಳಿದರು. ಯಾವುದೇ ನಿಟ್ಟಿನಲ್ಲಿ ಇಲ್ಲಿ ಗೊಂದಲ ಹಾಗೂ ಹಿಂಸೆ ಅವಕಾಶ ನೀಡಬಾರದು ಎಂದು ಪೋಪ್ ಫ್ರಾನ್ಸಿಸ್ ಜನತೆಗೆ ಕರೆ ನೀಡಿದರು. 

07 September 2024, 14:25