ವನೀಮೋ ನಗರದ ಕಥೋಲಿಕರಿಗೆ ಪೋಪ್: ಕ್ರಿಸ್ತರ ಶುಭಸಂದೇಶದ ಸೌಂದರ್ಯವನ್ನು ಪ್ರೀತಿಯಿಂದ ಪ್ರಚುರಪಡಿಸಿರಿ

ಪೋಪ್ ಫ್ರಾನ್ಸಿಸ್ ಅವರು ಶನಿವಾರ ಮಧ್ಯಾಹ್ನ ಪಪುವಾ ನ್ಯೂಗಿನಿಯ ಹೃದಯ ಭಾಗದಿಂದ ಅತಿ ದೂರ ಇರುವ ವನೀಮೋ ನಗರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಶುಭಸಂದೇಶ ಪ್ರಸಾರಕ ಗುರುಗಳನ್ನು ಭೇಟಿ ಮಾಡಿದರು ಅವರು, ಈ ಧಾರ್ಮಿಕ ಗುರುಗಳ ಬದ್ಧತೆಯನ್ನು ಹಾಗೂ ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅಲ್ಲಿನ ಕಥೋಲಿಕ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರಿಸ್ತರ ಶುಭಸಂದೇಶದ ಸೌಂದರ್ಯವನ್ನು ಪ್ರೀತಿಯಿಂದ ಪ್ರಚುರಪಡಿಸಿರಿ ಎಂದು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಇಲ್ಲಿನ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ "ನೀವು ಸೌಂದರ್ಯದ ನಿಪುಣರಾಗಿದ್ದೀರಿ ಏಕೆಂದರೆ ಈ ನಿಮ್ಮ ನಗರದಲ್ಲಿ ಇರುವುದೆಂದರೆ ಏದೆನ್ ತೋಟದಲ್ಲಿ ಇದ್ದಂತೆ ಭಾಸವಾಗುತ್ತಿದೆ" ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು "ವಿವಿಧ ಸಸ್ಯ ಹಾಗೂ ಮರಗಳಿಂದ ಕೂಡಿರುವ ಫಲವತ್ತಾದ ಪ್ರದೇಶದಲ್ಲಿ ನೀವು ಜೀವಿಸುತ್ತಿದ್ದೀರಿ" ಎಂದು ಹೇಳಿದರು.

ಕ್ರೈಸ್ತ ಮೌಲ್ಯಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಕ್ರೈಸ್ತರಾಗಿ, ಪ್ರಭುವಿನ ಹಿಂಬಾಲಕರಾಗಿ ಕ್ರಿಸ್ತೀಯ ಮೌಲ್ಯಗಳನ್ನು ಕಾಪಾಡುವುದು ಕೇವಲ ಗುರುಗಳ ಅಥವಾ ಶುಭಸಂದೇಶ ಪ್ರಸಾರಕರ ಕೆಲಸವಲ್ಲ. ಬದಲಿಗೆ, ನಾವೆಲ್ಲರೂ ಸಹ ದೇವಾಲಯದಲ್ಲಿ, ಶಾಲಾ-ಕಾಲೇಜುಗಳಲ್ಲಿ, ನಮ್ಮ ಮನೆಗಳು ಹಾಗೂ ನಾವು ಕೆಲಸ ಮಾಡುವ ಕಡೆಯಲ್ಲೆಲ್ಲಾ ಕ್ರಿಸ್ತೀಯ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು" ಎಂದು ನೆರೆದಿದ್ದ ಜನರಿಗೆ ಹೇಳಿದರು.

"ಪ್ರೀತಿ ಎಲ್ಲಕ್ಕಿಂತ ಮಿಗಿಲಾದುರು ಹಾಗೂ ಅದು ಹಂಚಿಕೊಂಡು ಬಾಳುವ ಸೌಂದರ್ಯದಲ್ಲಿ ಅಡಗಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು" ಎಂದು ಹೇಳಿದ ಪೋಪ್ ಫ್ರಾನ್ಸಿಸ್ "ಪ್ರೀತಿಯ ಬೇರುಗಳು ದೇವರಲ್ಲಿರುವ ಕಾರಣ ಅದು ಎಲ್ಲರನ್ನೂ, ಎಲ್ಲವನ್ನೂ ಗುಣಪಡಿಸುತ್ತದೆ" ಎಂದು ಹೇಳಿದರು.     

08 September 2024, 16:10