ಹುಡುಕಿ

ಬಲಿಪೂಜೆಯ ನಂತರ ಶಾಂತಿ ಮತ್ತು ಪ್ರಾಕೃತಿಕ ಮೇಲ್ವಿಚಾರಣೆಗೆ ಕರೆ ನೀಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದಾರೆ. ಇಲ್ಲಿ ಬಲಿಪೂಜೆಯನ್ನು ಅರ್ಪಿಸಿದ ನಂತರ ತ್ರಿಕಾಲ ಪ್ರಾರ್ಥನೆಯ ವೇಳೆ ಮಾತನಾಡಿರುವ ಅವರು ವಿಶ್ವದಲ್ಲಿ ಶಾಂತಿಗಾಗಿ ಹಾಗೂ ಅದೇ ಸಂದರ್ಭದಲ್ಲಿ ಮಾನವರೆಲ್ಲರೂ ಪ್ರಾಕೃತಿಕ ಮೇಲ್ವಿಚಾರಣೆಗೆ ಒತ್ತು ನೀಡಬೇಕೆಂದು ಕರೆ ನೀಡಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದಾರೆ. ಇಲ್ಲಿ ಬಲಿಪೂಜೆಯನ್ನು ಅರ್ಪಿಸಿದ ನಂತರ ತ್ರಿಕಾಲ ಪ್ರಾರ್ಥನೆಯ ವೇಳೆ ಮಾತನಾಡಿರುವ ಅವರು ವಿಶ್ವದಲ್ಲಿ ಶಾಂತಿಗಾಗಿ ಹಾಗೂ ಅದೇ ಸಂದರ್ಭದಲ್ಲಿ ಮಾನವರೆಲ್ಲರೂ ಪ್ರಾಕೃತಿಕ ಮೇಲ್ವಿಚಾರಣೆಗೆ ಒತ್ತು ನೀಡಬೇಕೆಂದು ಕರೆ ನೀಡಿದ್ದಾರೆ.

ತ್ರಿಕಾಲ ಪ್ರಾರ್ಥನೆಯ ಚಿಂತನೆಯಲ್ಲಿ ಮಾತನಾಡಿರುವ ಅವರು "ಮಾತೆ ಮರಿಯಮ್ಮನವರು ನಿಮ್ಮೊಡನೆ ಸದಾ ಕಾಲ ಇದ್ದು, ಪ್ರಭುವಿನ ಹೆಜ್ಜೆಗಳಲ್ಲಿ ನಿಮ್ಮನ್ನು ಮುನ್ನಡೆಸಲಿ" ಎಂದು ಪ್ರಾರ್ಥಿಸಿದರು.

ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ಇಂದೂ ಸಹ ಶಾಂತಿಯ ಕುರಿತು ಮಾತನಾಡಿದ್ದು, ವಿಶ್ವದಲ್ಲಿ ಶಾಂತಿ ನೆಲೆಸಲು ಎಲ್ಲರೂ ಪ್ರಾರ್ಥಿಸಬೇಕು ಹಾಗೂ ತಮ್ಮ ಕೈಲಾದುದನ್ನು ಮಾಡಬೇಕು ಎಂದು ಹೇಳಿದ್ದಾರೆ. ಪ್ರಕೃತಿಯೂ ಸಹ ನಮ್ಮ ಸಾಮಾನ್ಯ ಮನೆಯಾಗಿದ್ದು, ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ಪಪುವಾ ನ್ಯೂಗಿನಿಯ ಜನತೆಗೆ ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದಾರೆ.    

08 September 2024, 16:21