ಪೋಪ್ ಫ್ರಾನ್ಸಿಸ್: ಪ್ರಾರ್ಥನೆ ಮತ್ತು ಆಚರಣೆಯಲ್ಲಿ ವಿಶ್ವಾಸದಿಂದ ಜೀವಿಸಲು ನಾವು ಕರೆ ಹೊಂದಿದ್ದೇವೆ
ವರದಿ: ವ್ಯಾಟಿಕನ್ ನ್ಯೂಸ್
ಭಾನುವಾರದ ತ್ರಿಕಾಲ ಪ್ರಾರ್ಥನೆಗೂ ಮುಂಚಿತವಾಗಿ ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್ ಅವರು ದೇವರೊಂದಿಗಿನ ನಮ್ಮ ಸಂಬಂಧ ಭೌತಿಕ ಪರಿಧಿಗಳಿಂದಾಚೆ ಸಾಗುತ್ತದೆ ಹಾಗೂ ಆತ್ಮಿಕ ಸ್ವಭಾವಗಳಾದ ಪ್ರೀತಿ, ಕರುಣೆ ಹಾಗೂ ದಾನದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ನಮಗೆ ಕರೆ ನೀಡುತ್ತದೆ ಎಂದು ಹೇಳಿದ್ದಾರೆ.
ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ಹೇಗೆ ಬಾಹ್ಯ ಆಚರಣೆಗಳು ನಮ್ಮನ್ನು ಅಶುದ್ಧರನ್ನಾಗಿಸುವುದಿಲ್ಲ ಬದಲಿಗೆ ನಮ್ಮ ಆಂತರಿಕ ವಿಚಾರಗಳು ಹಾಗೂ ನಮ್ಮ ಒಳಗಿಂದ ಆಚೆಗೆ ಬರುವ ವಿಚಾರಗಳು ನಮ್ಮನ್ನು ನಿಜವಾಗಿಯೂ ಅಶುದ್ಧರಾಗಿಸುತ್ತದೆ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ತಮ್ಮ ಚಿಂತನೆಯನ್ನು ಮುಂದುವರೆಸಿದ ಅವರು ಈ ದಿನದ ಶುಭಸಂದೇಶದ ತಿರುಳೇನೆಂದರೇ ನಾವು ಬಲಿಪೂಜೆಯಲ್ಲಿ ಭಾಗವಹಿಸಿ ಮತ್ತದೇ ದೂಷಣೆ ಹಾಗೂ ಪರರ ಕುರಿತು ಅರ್ಥಹೀನ ಮಾತುಕತೆಯಲ್ಲಿ ತೊಡಗಲು ಸಾಧ್ಯವಿಲ್ಲ. ಹೀಗೆ ನಾವು ಮಾಡಿದರೆ ನಮ್ಮ ಭಕ್ತಿಪೂರ್ವಕ ನಡವಳಿಕೆಗೆ ಅರ್ಥ ಬರುವುದಾದರೂ ಎಲ್ಲಿಂದ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.