ಯುವ ಜನತೆಗೆ ಪೋಪ್: ನೀವು ಜೀವ, ಭರವಸೆ ಹಾಗೂ ಭವಿಷ್ಯವಾಗಿದ್ದೀರಿ

ಪೋಪ್ ಫ್ರಾನ್ಸಿಸ್ ಅವರು ಪ್ರತಿ ಬಾರಿ ವಿವಿಧ ದೇಶಗಳಿಗೆ ಪ್ರೇಷಿತ ಭೇಟಿಯನ್ನು. ನೀಡುವಾಗ ಕಂಡು ಬರುವ ಸಾಮಾನ್ಯ ಅಂಶವೆಂದರೆ ಅದು ಅವರು ಅಲ್ಲಿನ ಪ್ರದೇಶಗಳ ಯುವ ಜನತೆಯ ಜೊತೆಗೆ ಹಮ್ಮಿಕೊಳ್ಳುವ ಅನೌಪಚಾರಿಕ ಸಂವಾದಗಳು. ಇಂತಹ ಸಂವಾದಗಳು ಅವರ ಭೇಟಿಯ ಕೇಂದ್ರಬಿಂದುಗಳಾಗಿರುತ್ತವೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಪ್ರತಿ ಬಾರಿ ವಿವಿಧ ದೇಶಗಳಿಗೆ ಪ್ರೇಷಿತ ಭೇಟಿಯನ್ನು. ನೀಡುವಾಗ ಕಂಡು ಬರುವ ಸಾಮಾನ್ಯ ಅಂಶವೆಂದರೆ ಅದು ಅವರು ಅಲ್ಲಿನ ಪ್ರದೇಶಗಳ ಯುವ ಜನತೆಯ ಜೊತೆಗೆ ಹಮ್ಮಿಕೊಳ್ಳುವ ಅನೌಪಚಾರಿಕ ಸಂವಾದಗಳು. ಇಂತಹ ಸಂವಾದಗಳು ಅವರ ಭೇಟಿಯ ಕೇಂದ್ರಬಿಂದುಗಳಾಗಿರುತ್ತವೆ.

ಇತ್ತೀಚೆಗಷ್ಟೇ ಪೋಪ್ ಫ್ರಾನ್ಸಿಸ್ ಅವರು ಟಿಮೋರ್ ಲೆಸ್ಟೆ ದೇಶಕ್ಕೆ ಭೇಟಿ ನೀಡಿದ್ದರು. ಟಿಮೋರ್ ಲೆಸ್ಟೆ ದೇಶದ ಬಹುತೇಕ ಜನಸಂಖ್ಯೆಯು ಮೂವತ್ತೈದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯುವ ಸಮೂಹವನ್ನು ಹೊಂದಿದ್ದು, ಅವರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಮಾತನಾಡಿದ್ದಾರೆ ಮಾತ್ರವಲ್ಲದೆ ಅವರೊಂದಿಗೆ ಅನೌಪಚಾರಿಕ ಸಂವಾದವನ್ನು ನಡೆಸಿದ್ದಾರೆ.

ಇಂತಹ ಅನೌಪಚಾರಿಕ ಸಂವಾದಗಳು ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಭೇಟಿಯ ಕೇಂದ್ರ ಬಿಂದುಗಳಾಗಿ, ಬಹುಮುಖ್ಯ ಕಾರ್ಯಕ್ರಮಗಳಲ್ಲೊಂದಾಗುತ್ತವೆ.

ಹೀಗೆ ಇಲ್ಲಿನ ಯುವ ಸಮೂಹದ ಜೊತೆಗೆ ಸಂವಾದವನ್ನು ನಡೆಸುವ ವೇಳೆ ಪೋಪ್ ಫ್ರಾನ್ಸಿಸ್ ಅವರು ಯುವ ಜನತೆಯನ್ನು ಉದ್ದೇಶಿಸಿ "ನೀವು ಜೀವವಾಗಿದ್ದು, ನಮ್ಮ ಭರವಸೆ ಹಾಗೂ ಭವಿಷ್ಯವಾಗಿದ್ದೀರಿ" ಎಂದು ಹೇಳುವ ಮೂಲಕ ಅವರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ.

ತಮ್ಮ ಪ್ರತಿ ಪ್ರೇಷಿತ ಭೇಟಿಯ ಸಂದರ್ಭಲ್ಲೂ ಸಹ ಪೋಪ್ ಫ್ರಾನ್ಸಿಸ್ ಅವರು ಯುವ ಜನತೆಗೆ ವಿಶೇಷ ಗಮನವನ್ನು ನೀಡುತ್ತಾರೆ.    

11 September 2024, 19:08