ಟಿಮೋರ್ ಲೆಸ್ಟೆ ದೇಶಕ್ಕೆ ಬಂದಿಳಿದ ಪೋಪ್ ಫ್ರಾನ್ಸಿಸ್; ಮಕ್ಕಳೊಂದಿಗೆ ಮಾತುಕತೆ

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶದ ನಂತರ ಇದೀಗ ಟಿಮೋರ್ ಲೆಸ್ಟೆ ಎಂಬ ಪುಟ್ಟ ದೇಶಕ್ಕೆ ಬಂದಿಳಿದಿದ್ದು, ಇಲ್ಲಿನ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣ ಸರಣಿಯ ಮೂರನೇ ದೇಶವು ಇದಾಗಿದ್ದು, ಇದಕ್ಕೂ ಮುಂಚಿತವಾಗಿ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಿದ್ದರು.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶದ ನಂತರ ಇದೀಗ ಟಿಮೋರ್ ಲೆಸ್ಟೆ ಎಂಬ ಪುಟ್ಟ ದೇಶಕ್ಕೆ ಬಂದಿಳಿದಿದ್ದು, ಇಲ್ಲಿನ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣ ಸರಣಿಯ ಮೂರನೇ ದೇಶವು ಇದಾಗಿದ್ದು, ಇದಕ್ಕೂ ಮುಂಚಿತವಾಗಿ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಿದ್ದರು.

ಪೋಪ್ ಫ್ರಾನ್ಸಿಸ್ ಟಿಮೋರ್ ಲೆಸ್ಟೆ ರಾಜಧಾನಿ ಡಿಲಿ ನಗರದಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಈ ವೇಳೆ ಈ ದೇಶದ ಸುಮಾರು ಆರು ಲಕ್ಷ ಜನರು ಅಂದರೆ ಅರ್ಧದಷ್ಟು ಜನರು ಈ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಮಕ್ಕಳನ್ನು ಕುರಿತು ತಮ್ಮ ಪ್ರಭೋದನೆಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಮಕ್ಕಳು ನಮಗೆ ನೀಡಲಾಗಿರುವ ವರದಾನ ಹಾಗೂ ಸಂಕೇತ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಯೆಶಾಯನ ಗ್ರಂಥದ "ಹುಟ್ಟಿತೆಮಗೆ ಮಗುವೊಂದು ಕೊಟ್ಟರೆಮಗೆ ವರಸುತನ" ಎಂಬ ವಾಕ್ಯಗಳ ಮೇಲೆ ಚಿಂತನೆಯನ್ನು ನಡೆಸಿದರು. ಮಕ್ಕಳೆಂದರೆ ನಮಗೆ ದೇವರು ನೀಡಿರುವ ವರದಾನ ಹಾಗೂ ಹೊಸ ಭವಿಷ್ಯದ ಸಂಕೇತ ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಯೇಸುಕ್ರಿಸ್ತರು ಮಕ್ಕಳಂತಾಬೇಕು ಎಂದು ನಮಗೆ ಸಂದೇಶವನ್ನು ನೀಡಿದ್ದಾರೆ.

ಟಿಮೋರ್ ಲೆಸ್ಟೆ ದೇಶದಲ್ಲಿ ಇಷ್ಟೊಂದು ಮಕ್ಕಳಿರುವುದನ್ನು ನೋಡಿ ನನಗೆ ಅತೀವ ಸಂತೋಷವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

10 September 2024, 14:35