ಹುಡುಕಿ

ಮಕ್ಕಳಿಗೆ ಪೋಪ್ ಫ್ರಾನ್ಸಿಸ್: ಸೇವೆ ಹಾಗೂ ಅರೈಕೆಯನ್ನು ಮಾಡಲು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು

ಪೋಪ್ ಫ್ರಾನ್ಸಿಸ್ ಅವರು ವಿಶೇಷಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡುವವರಿಗೆ, ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ: ಫ್ರಾಂಚೆಸ್ಕೋ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ವಿಶೇಷಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡುವವರಿಗೆ, ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶದ ನಂತರ ಇದೀಗ ಟಿಮೋರ್ ಲೆಸ್ಟೆ ಎಂಬ ಪುಟ್ಟ ದೇಶಕ್ಕೆ ಬಂದಿಳಿದಿದ್ದು, ಇಲ್ಲಿನ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣ ಸರಣಿಯ ಮೂರನೇ ದೇಶವು ಇದಾಗಿದ್ದು, ಇದಕ್ಕೂ ಮುಂಚಿತವಾಗಿ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಿದ್ದರು.

ಇಲ್ಲಿನ ಇರ್ಮಾಸ್ ಆಲ್ಮಾ ಶಾಲೆಗೆ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್ ಅವರು ಮಕ್ಕಳೊಂದಿಗೆ ಬೆರೆತು ಮಾತನಾಡಿದರು. ಪೋಪ್ ಫ್ರಾನ್ಸಿಸ್ ಅವರನ್ನು ನೋಡಲು ಇಲ್ಲಿನ ಜನತೆ ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಬಂದಿದ್ದರು.

ಈ ವೇಳೆ ಮಕ್ಕಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ದೇವರು ನಿಮ್ಮನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ಸೇವೆ ಹಾಗೂ ಆರೈಕೆಯನ್ನು ಮಾಡಲು ನಮಗೆ ಕಲಿಸುತ್ತಿರುವುದಕ್ಕಾಗಿ ನಿಮಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದು ಅವರು ವಿಶೇಷ ಚೇತನ ಮಕ್ಕಳ ಆರೈಕೆಯನ್ನು ಮಾಡುತ್ತಿರುವ ಸೇವಕರಿಗೆ ಹೇಳಿದರು.

10 September 2024, 14:38