ಹುಡುಕಿ

ಟಿಮೋರ್ ಲೆಸ್ಟೆಯ ಗುರುಗಳು, ಭಗಿನಿಯರು, ಧರ್ಮೋಪದೇಶಕರಿಗೆ ಪೋಪ್: ಕ್ರಿಸ್ತರ ಸುಗಂಧವನ್ನು ಪಸರಿಸುವವರು ನೀವು

ಟಿಮೋರ್ ಲೆಸ್ಟೆ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ರಾಜಧಾನಿ ಡಿಲಿ ನಗರದ ಅಮಲೋಧ್ಭವಿ ಮಾತೆ ಪ್ರಧಾನಾಲಯದಲ್ಲಿ ಟಿಮೋರ್ ಲೆಸ್ಟೆಯ ಗುರುಗಳು, ಭಗಿನಿಯರು, ಧಾರ್ಮಿಕ ಸಹೋದರ ಸಹೋದರಿಯರು, ಗುರು ಅಭ್ಯರ್ಥಿಗಳು ಹಾಗೂ ಶ್ರೀಸಾಮಾನ್ಯ ಧರ್ಮೋಪದೇಶಕರನ್ನು ಭೇಟಿ ಮಾಡಿ, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯೇಸುಕ್ರಿಸ್ತರ ಶುಭಸಂದೇಶದ ಸುಗಂಧವನ್ನು ಸೂಸುವವರು ಹಾಗೂ ಅದನ್ನು ಪಸರಿಸುವವರು ನೀವಾಗಿದ್ದೀರಿ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ದೇವರ ಕರೆಗೆ ಓಗೊಟ್ಟು, ಅವರನ್ನು ಹಿಂಬಾಲಿಸಲು ಎಲ್ಲವನ್ನೂ ತೊರೆದು ಬಂದಿರುವ ನೀವು ಅವರ ಶುಭ ಸಂದೇಶದ ಸುಗಂಧವನ್ನು ನೀವಿರುವೆಡೆ ಹಾಗೂ ಎಲ್ಲಾ ಕಡೆ ಪಸರಿಸಬೇಕೆಂದು ಕರೆ ನೀಡಿದರು.

ನಿಸ್ತೇಜವಾದ ಆಧ್ಯಾತ್ಮಿಕತೆಯನ್ನು ಹೊಂದುವ ಅಪಾಯಗಳ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು, ನಮ್ಮ ಆಧ್ಯಾತ್ಮಿಕತೆ ಹಾಗೂ ಪ್ರಭುವಿನೊಡನೆ ಉತ್ತಮ ಸಂಬಂಧವನ್ನು ಹೊಂದುವ ನಿಟ್ಟಿನಲ್ಲಿ ನಾವು ನಿಸ್ತೇಜರಾಗಬಾರದು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ನಮಗೆ ಕರೆಗೆ ನಾವು ಬದ್ಧರಾಗಿ, ಸೇವಾ ಮನೋಭಾವದಿಂದ ಧಾರ್ಮಿಕ ಬದುಕನ್ನು ಮಾದರಿಯಾಗಿ ಜೀವಿಸ ಬೇಕು ಎಂದು ಕರೆ ನೀಡಿದ್ದಾರೆ.

10 September 2024, 14:41