ಹುಡುಕಿ

ಪೋಪ್ ಫ್ರಾನ್ಸಿಸರ ವಿಶ್ವ ಯುವದಿನ ಸಂದೇಶ: ಪ್ರಭುವಿನಲ್ಲಿ ಭರವಸೆಯಿಡಿ, ನೀವು ಬಳಲುವುದಿಲ್ಲ.

ಪೋಪ್ ಫ್ರಾನ್ಸಿಸ್ ಅವರು ವಿಶ್ವ ಯುವ ದಿನಕ್ಕೆ ತಮ್ಮ ಸಂದೇಶವನ್ನು ನೀಡಿದ್ದು, ಯುವ ಜನತೆ ಪ್ರಭು ಕ್ರಿಸ್ತರಲ್ಲಿ ಭರವಸೆಯನ್ನು ಇಡಬೇಕು ಎಂದು ಹೇಳಿದ್ದಾರೆ.

ವರದಿ: ಫ‌್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು 39ನೇ ವಿಶ್ವ ಯುವ ದಿನಕ್ಕೆ ತಮ್ಮ ಸಂದೇಶವನ್ನು ನೀಡಿದ್ದು, ಇದರ ಮುಖ್ಯ ಶೀರ್ಷಿಕೆ "ಫ್ರಭುವಿನಲ್ಲಿ ಭರವಸೆಯಿಟ್ಟರೆ ನೀವು ಬಳಲುವುದಿಲ್ಲ" ಎಂಬುದಾಗಿದೆ.    

ಯುವಜನರು ಎದುರಿಸುತ್ತಿರುವ ಕೆಲವು ತೊಂದರೆಗಳ ಹಿನ್ನೆಲೆಯಲ್ಲಿ, ಪೋಪ್ ಫ್ರಾನ್ಸಿಸ್ ಅವರಿಗೆ ಕೊಂಚ ಬಿಡುವು ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಭರವಸೆಯು ಕೇವಲ ನಿಷ್ಕ್ರಿಯ ಭಾವನೆಯಲ್ಲ ಆದರೆ ಸಕ್ರಿಯ ಶಕ್ತಿಯಾಗಿದೆ, ಅದು ನಮಗೆ "ಮುಂದಕ್ಕೆ ಹೊರಡಲು ಅನುವು ಮಾಡಿಕೊಡುತ್ತದೆ, ಏಕೆಂದರೆ ಅದು ದೇವರಿಂದ ಪಡೆದ ಉಡುಗೊರೆಯಾಗಿದೆ" ಎಂದು ಅವರು ಒತ್ತಿ ಹೇಳಿದರು.

ಪೋಪ್ ಫ್ರಾನ್ಸಿಸ್ ಅವರು ಜೀವನದ ಹೋರಾಟಗಳೊಂದಿಗೆ ಬರಬಹುದಾದ ಆಯಾಸದ ಕುರಿತೂ ಸಹ ತಿಳಿಸಿದರು. ಈ ದಣಿವು ಅರ್ಥಪೂರ್ಣ ಪ್ರಯಾಣವನ್ನು ಪ್ರಾರಂಭಿಸುವ ಎಲ್ಲರಿಗೂ ಸಾಮಾನ್ಯವಾಗಿದೆ ಮತ್ತು ಅಂತಹ ಆಯಾಸಕ್ಕೆ ಪರಿಹಾರವು ವಿಶ್ರಾಂತಿಯಲ್ಲಿ ಕಂಡುಬರುವುದಿಲ್ಲ ಆದರೆ "ಭರವಸೆಯ ಯಾತ್ರಿಕರಾಗುವಲ್ಲಿ" ಕಂಡುಬರುತ್ತದೆ ಎಂದು ಅವರು ಗಮನಿಸಿದರು.

ತನ್ನ ಸಂದೇಶದಲ್ಲಿ, ಪೋಪ್ ಯುವಕರನ್ನು ಜೀವನವನ್ನು ಸಂಪೂರ್ಣವಾಗಿ ಸ್ವೀಕರಿಸಲು ಆಹ್ವಾನಿಸಿದರು, ನಿಶ್ಚಲತೆಯ ವಿರುದ್ಧ ಎಚ್ಚರಿಕೆ ನೀಡಿದ ಅವರು, ಬಲಿಪೂಜೆಯೊಂದೆ ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುವ ದಾರಿ ಎಂದು ಹೇಳಿದರು.

17 September 2024, 17:28